Annabhagya: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ನಿಮಗೆಲ್ಲ ಗೊತ್ತಿರುವ ಹಾಗೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ಅಕ್ಕಿ ಇದೀಗ ದೊರೆಯುತ್ತಿದ್ದು, ಮತ್ತು 5 ಕೆಜಿ ಅಕ್ಕಿಗೆ ಹಣವನ್ನು ನೀಡಲಾಗುತ್ತಿದೆ. ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವರಾಗಿರುವ ಕೆ.ಹೆಚ್. ಮುನಿಯಪ್ಪನವರು ಅನ್ನಭಾಗ್ಯ ಯೋಜನೆಯಡಿಯಲ್ಲಿ ಹಣದ ಬದಲು ದಿನಸಿ ಕಿಟ್ ವಿತರಣೆ ಮಾಡುವ ಯೋಚನೆ ಮಾಡಿದ್ದಾರೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ. ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಅನ್ನಭಾಗ್ಯ (Annabhagya) ಯೋಜನೆ:
ಕಾಂಗ್ರೆಸ್ ಸರ್ಕಾರವು 10 ಕೆಜಿ ಹಕ್ಕಿಗಳನ್ನು ನೀಡುವ ಗುರಿ ಇಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತಂದಿರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ. ಈ ಮೊದಲು ಅಡುಗೆ ಎಣ್ಣೆ, ಜೋಳ, ಸಕ್ಕರೆ, ಉಪ್ಪು ಮುಂತಾದ ಪದಾರ್ಥಗಳನ್ನು ನೀಡಲಾಗುತ್ತಿತ್ತು ಎಂದು ನಿಮಗೆಲ್ಲ ಗೊತ್ತಿದೆ. ಇದೀಗ ಈ ಹಾರಧಾನ್ಯಗಳು ಮತ್ತೆ ವಿತರಣೆ ಮಾಡಲು ಆಹಾರ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಇಟ್ಟಿದೆ ಎಂದು ತಿಳಿದು ಬಂದಿರುತ್ತದೆ. ಈ ಎಲ್ಲಾ ಆಹಾರ ಧಾನ್ಯಗಳ ವಿತರಣೆ ಅಕ್ಟೋಬರ್ 1 ನೇ ತಾರೀಖಿನಿಂದ ಜಾರಿಗೊಳಿಸಲಾಗುವುದು ಎಂದು ತಿಳಿದು ಬಂದಿರುತ್ತದೆ.
ಕೇಂದ್ರ ಸರ್ಕಾರವು ನೀಡುತ್ತಿರುವ 5 ಕೆಜಿ ಅಕ್ಕಿ ಹೊರತಾಗಿ ರಾಜ್ಯ ಸರ್ಕಾರವು ಇನ್ನೂ 5 ಕೆಜಿ ಅಕ್ಕಿ ಬದಲಿಗೆ ಒಂದು ಕೆಜಿ ಅಕ್ಕಿಗೆ ₹34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ ₹170 ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರವು ಒಪ್ಪಿದ ಹಾಗೆ ಪ್ರತಿ ಕೆಜಿ ಅಕ್ಕಿಗೆ ₹34 ರೂಪಾಯಿ ದರದಲ್ಲಿ ಅಕ್ಕಿ ಪೂರೈಸುತ್ತಿದ್ದು, ರಾಜ್ಯ ಸರ್ಕಾರ ಇನ್ನು ಐದು ಕೆಜಿ ಅಕ್ಕಿ ಗ್ಯಾರಂಟಿ ಭರವಸೆಯನ್ನು ಈಡೇರಿಸಲಿದೆ ಹಾಗೂ ಅಕ್ಟೋಬರ್ 01ನೇ ತಾರೀಖಿನಿಂದ ನ್ಯಾಯಬೆಲೆ ಅಂಗಡಿಯ ಮೂಲಕ ಪ್ರತಿ ತಿಂಗಳಿಗೆ 10 ಕೆ.ಜಿ ಅಕ್ಕಿಯನ್ನು ನೀವು ಪಡೆಯುವ ಸಾಧ್ಯತೆ ಇದೆ.
ಆಹಾರ ಇಲಾಖೆಯ ಸಚಿವರಾಗಿರುವ ಕೆ.ಎಚ್. ಮುನಿಯಪ್ಪನವರು ತಿಳಿಸಿರುವ ವಿಷಯದ ಪ್ರಕಾರ ಅಕ್ಟೋಬರ್ 1 ನೇ ತಾರೀಖಿನಿಂದ ದಿನನಿತ್ಯ ಬಳಸುವ ವಸ್ತುಗಳಾಗಿರುವ ಅಡುಗೆ ಎಣ್ಣೆ, ಸಕ್ಕರೆ, ಬೇಳೆ ಉಪ್ಪು ಮುಂತಾದ ವಸ್ತುಗಳನ್ನು ದಿನಸಿ ಕಿಟ್ ರೂಪದಲ್ಲಿ ವಿತರಣೆ ಮಾಡಲಾಗುವ ಸಾಧ್ಯತೆ ಇರುತ್ತದೆ. ಇದು ಅನ್ನಬಾಗ್ಯ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ ಎಂದು ಹೇಳಬಹುದಾಗಿರುತ್ತದೆ.