BSNL Best Plan: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಬಿಎಸ್ಎನ್ಎಲ್ ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮವಾದ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಪ್ಲಾನ್ ಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಬಹುದು. ಹಾಗಾದರೆ ಯಾವುವು ಆ ಬೆಸ್ಟ್ ಪ್ಲಾನ್ ಗಳು ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳಿ.
₹107 ರ ಪ್ಲಾನ್:
ಬಿಎಸ್ಎನ್ಎಲ್ ವತಿಯಿಂದ ಕಡಿಮೆ ಬೆಲೆಯಲ್ಲಿ ದೊರಕುವ ಪ್ಲಾನ್ ಇದಾಗಿದ್ದು, ಇದರಲ್ಲಿ ಹಲವಾರು ಬೆನಿಫಿಟ್ ಗಳನ್ನು ನೀವು ಪಡೆಯುತ್ತೀರಾ. ಈ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ನೀವು 35 ದಿನಗಳವರೆಗೆ ವ್ಯಾಲಿಡಿಟಿ ಹೊಂದಿರುತ್ತದೆ. 200 ನಿಮಿಷಗಳ ಮಾತನಾಡುವ ಪ್ರಯೋಜನವನ್ನು ಪಡೆಯುತ್ತೀರಾ. ಇದರ ಜೊತೆಗೆ 3GB ಡೇಟಾವನ್ನು ಕೂಡ ಪಡೆದುಕೊಳ್ಳುತ್ತೀರಾ.
₹153 ರ ರಿಚಾರ್ಜ್ ಪ್ಲಾನ್:
ನೀವೇನಾದರೂ 153 ರೂಪಾಯಿ ರಿಚಾರ್ಜ್ ಪ್ಲಾನನ್ನು ಬಳಸಿಕೊಂಡರೆ, 26 ದಿನಗಳವರೆಗಿನ ವ್ಯಾಲಿಡಿಟಿಯನ್ನು ಪಡೆಯುತ್ತೀರಾ. ಅನಿಯಮಿತ ಕರೆಗಳು ಹಾಗೂ 26GB ಡೇಟಾವನ್ನು ಕೂಡ ಪಡೆದುಕೊಳ್ಳುತ್ತೀರಾ. ಈ ಯೋಜನೆಯಲ್ಲಿ ಬಿಎಸ್ಎನ್ಎಲ್ ಹಲೋ ಟ್ಯೂನ್ ಹಾಗೂ ಇನ್ನಿತರ ಸೇವೆಗಳನ್ನು ನೀವು ಆನಂದಿಸಬಹುದಾಗಿರುತ್ತದೆ.
ಮೇಲೆ ನೀಡಿರುವ ಪ್ಲಾನ್ ಗಳು ಬಿಎಸ್ಎನ್ಎಲ್ ವತಿಯಿಂದ ಲಭ್ಯವಿರುವ ಉತ್ತಮ ಪ್ಲಾನ್ ಗಳಲ್ಲಿ ಒಂದಾಗಿರುತ್ತವೆ. ಆದ್ದರಿಂದ ನಿಮ್ಮ ಹತ್ತಿರ ಬಿಎಸ್ಎನ್ಎಲ್ ನೆಟ್ವರ್ಕ್ ಯಾವ ರೀತಿ ಇದೆ ಎಂಬುದರ ಮೇರೆಗೆ ನೀವು ಬಿಎಸ್ಎನ್ಎಲ್ ಸಿಮ್ ಅನ್ನು ಖರೀದಿಸಿ. ನಂತರ ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು ಬಿಎಸ್ಎನ್ಎಲ್ ವತಿಯಿಂದ ರೀಚಾರ್ಜ್ ಪ್ಲಾನ್ ಗಳನ್ನು ಪಡೆಯಬಹುದಾಗಿರುತ್ತದೆ.