CA Scholarship: ನಮಸ್ಕಾರ ಎಲ್ಲರಿಗೂ, ಈ ಲೇಖನದಲ್ಲಿ ತಿಳಿಸುವ ವಿಷಯವೇನೆಂದರೆ, ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2024 ಹಾಗೂ 25ನೇ ಸಾಲಿನ ಕೋರ್ಟೆವಾ ಅಗ್ರಿ ಸೈನ್ಸ್ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತಿದ್ದು, ಅರ್ಹ ಮತ್ತು ಆಸಕ್ತಿ ಉಳ್ಳಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಸಂಪೂರ್ಣವಾದ ವಿವರ ಇಲ್ಲಿದೆ ನೋಡಿ.
ಕೋರ್ಟೆವಾ ಅಗ್ರಿ ಸೈನ್ಸ್ ಇಂಡಿಯಾ ಪ್ರೈ.ಲಿ. ವತಿಯಿಂದ ಲಭ್ಯ ಇರುವ ಸ್ಕಾಲರ್ಶಿಪ್ ಸ್ನಾತಕೋತ್ತರ ಹಾಗೂ ಅಥವಾ ಪದವಿ ಪೂರ್ವ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ 11 ಮತ್ತು 12ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಉಪಯೋಗವಾಗಲಿ ಎಂದು ಸಹಾಯಧನ ನೀಡುವ ಕಾರ್ಯಕ್ರಮ ಆಗಿರುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:
ಅರ್ಜಿದಾರ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಭಾರತೀಯ ನಿವಾಸಿಯಾಗಿರಬೇಕು ಹಾಗೂ ಕೋರ್ಟ್ ಎವ ಹಾಗೂ ಬಡ್ಡಿ ಫೋರ್ ಸ್ಟಡಿ ಉದ್ಯೋಗಿಯ ಮಕ್ಕಳಾಗಿರಬಾರದು.
ಸ್ನಾತಕೋತ್ತರ (ಎಂ.ಬಿ.ಎ./ಎಂ.ಎಸ್ಸಿ./ಎಮ್.ಟೆಕ್) ಹಾಗೂ ಪದವಿಪೂರ್ವ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿ ವೇತನ ಎಷ್ಟು ದೊರಕುತ್ತದೆ:
- ಶಾಲಾ ವಿದ್ಯಾರ್ಥಿಗಳಿಗೆ: ₹10,000/-
- ಯು.ಜಿ. ವಿದ್ಯಾರ್ಥಿಗಳಿಗೆ: ₹25,000/-
- ಪಿ.ಜಿ. ವಿದ್ಯಾರ್ಥಿಗಳಿಗೆ: ₹50,000/-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13/09/2024 ಆಗಿರುತ್ತದೆ. ಆದ್ದರಿಂದ ಕೊನೆ ದಿನಾಂಕದ ಒಳಗಾಗಿ ಆಸಕ್ತಿ ಮತ್ತು ಅರ್ಹತೆ ಉಳ್ಳಂತ ವಿದ್ಯಾರ್ಥಿಗಳು ಕೇಳಲಾದ ಎಲ್ಲಾ ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್: ಅಪ್ಲೈ ಮಾಡಿ!
ನಿಮಗೆ ನಾವು ಮೇಲೆ ಕೊಟ್ಟಿರುವ ಜಾಲತಾಣದ ಲಿಂಕನ್ನು ಬಳಸಿಕೊಂಡು ನೀವು ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಹೇಳಬಹುದು. ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿದರೆ ಮಾತ್ರ ಮಾನ್ಯವಾಗಿರುತ್ತದೆ ಎಂದು ಹೇಳಬಹುದು.