Google Pay Loan: ನಮಸ್ಕಾರ ಎಲ್ಲರಿಗೂ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ನೀವು ಗೂಗಲ್ ಪೇ ಬಳಸುತ್ತಿದ್ದೀರಾ? ಹಾಗಾದರೆ ನಿಮಗೆ ಒಂದು ಸಿಹಿ ಸುದ್ದಿ ಎಂದೇ ಹೇಳಬಹುದು. ಏಕೆಂದರೆ, ಗೂಗಲ್ ಪೇ ಬಳಸುತ್ತಿದ್ದವರಿಗೆ 10,000 ದಿಂದ 5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವ ಸೌಲಭ್ಯವನ್ನು ನೀಡಲಾಗಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆ! ನಿಮಗೂ ಬಂತಾ ಚೆಕ್ ಮಾಡಿ.
ತುಂಬಾ ಜನರು ಹಣಕ್ಕಾಗಿ ಇತರರ ಬಳಿ ಸಾಲ ಕೇಳುತ್ತಾರೆ. ಹಾಗಾಗಿ ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಿನ ಜನರು ಮೊಬೈಲ್ ನಲ್ಲಿ ಆನ್ಲೈನ್ ಪೇಮೆಂಟ್ ಟ್ರಾನ್ಸಾಕ್ಷನ್ ಗಳನ್ನು ಮಾಡುತ್ತಿದ್ದಾರೆ. ನಿಮಗೆ ಆನ್ಲೈನ್ ಪೇಮೆಂಟ್ ಟ್ರಾನ್ಸ್ಲಾಕ್ಷನ್ ಮಾಡುವ ಒಂದು ಅಪ್ಲಿಕೇಶನ್ ಅಂದರೆ ‘ಗೂಗಲ್ ಪೇ’ ನಲ್ಲಿ ಯಾವ ರೀತಿ ಸಾಲ ಪಡೆದುಕೊಳ್ಳಬೇಕು ಎಂಬ ಮಾಹಿತಿ ಗೊತ್ತಿದೆಯಾ.?
ಗೂಗಲ್ ಪೇ ಲೋನ್ (Google Pay Loan)
ಸಾಕಷ್ಟು ಜನರು ಇತ್ತೀಚಿನ ದಿನಮಾನಗಳಲ್ಲಿ ಹಣದ ವಹಿವಾಟಿಗಾಗಿ ಗೂಗಲ್ ಪೇ ಹಾಗೂ ಫೋನ್ ಪೇ ಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಸಾಕಷ್ಟು ಸೇವೆಗಳು ಹಾಗೂ ಸೌಲಭ್ಯಗಳನ್ನು ಈ ಅಪ್ಲಿಕೇಶನ್ ಗಳು ಒದಗಿಸುತ್ತವೆ ಆದರೆ ತುಂಬಾ ಜನರಿಗೆ ಈ ಮಾಹಿತಿಯು ಗೊತ್ತಿರುವುದಿಲ್ಲ. ಹಾಗಾಗಿ ನೀವು ಬಳಸುವ ಗೂಗಲ್ ಪೇ ಹಾಗೂ ಫೋನ್ ಪೇ ಮೂಲಕ ನೀವು ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾಗಿರುತ್ತದೆ.
ಗೂಗಲ್ ಪೇ ತುಂಬಾ ಸುಲಭವಾಗಿ ನಿಮಗೆ ಪರ್ಸನಲ್ ಲೋನನ್ನು ಪಡೆದುಕೊಳ್ಳಲು ಸಹಾಯಕಾರಿಯಾಗುತ್ತದೆ ಇದಕ್ಕಾಗಿ ನೀವು ಯಾವುದೇ ಬ್ಯಾಂಕುಗಳಿಗೆ ಅಲೆದಾಡುವ ಅವಶ್ಯಕತೆ ಇರುವುದಿಲ್ಲ. ಮೊಬೈಲ್ನಲ್ಲಿಯೇ ನೀವು ಕೇವಲ ಹತ್ತು ನಿಮಿಷಗಳಲ್ಲಿ ನೀವು ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾಗಿರುತ್ತದೆ ಯಾವ ರೀತಿ ಎಂದು ತಿಳಿದುಕೊಳ್ಳಲು ಮತ್ತು ಯಾವ ದಾಖಲೆಗಳು ಬೇಕಾಗುತ್ತದೆ ಕೆಳಗೆ ನೋಡಿ.
ಬೇಕಾಗುವ ದಾಖಲೆಗಳು!
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಆಧಾರ್ ಕಾರ್ಡ್
- ಪಾನ್ ಕಾರ್ಡ್
ಗೂಗಲ್ ಪೇ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಹೇಗೆ?
- ಗೂಗಲ್ ಪೇ ಮೂಲಕ ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ.
- ತದನಂತರ ನೀವು ಅಪ್ಲಿಕೇಶನ್ ಅಲ್ಲಿ ರಿಜಿಸ್ಟರ್ ಮಾಡಿಕೊಂಡ ನಂತರ ನಿಮ್ಮ ಖಾತೆಯನ್ನು ತೆರೆಯಿರಿ.
- ಅದಾದ ಮೇಲೆ ಗೂಗಲ್ ಪೇ ಸರ್ವಿಸಸ್ ಗಳು ಅಲ್ಲಿ ನಿಮಗೆ ಕಾಣಿಸುತ್ತವೆ ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ಅಲ್ಲಿ ವಿವಿಧ ರೀತಿಯ ಸಾಲವನ್ನು ಪಡೆದುಕೊಳ್ಳಲು ಸೌಲಭ್ಯಗಳು ಕಾಣಿಸುತ್ತವೆ.
- ಅದರಲ್ಲಿ ನೀವು ವೈಯಕ್ತಿಕ ಸಾಲ ಆಯ್ಕೆ ಮಾಡಿಕೊಂಡ ನಂತರ ಮುಂದುವರೆಯಿರಿ.
- ಅದಾದ ನಂತರ ನಿಮಗೆ ಕೆಳಗೆ ನೀಡಿರುವಂತಹ ದಾಖಲಾತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲೋಡ್ ಮಾಡಿಕೊಳ್ಳಿ ಮತ್ತು ವೈಯಕ್ತಿಕ ವಿವರಗಳನ್ನು ಹಾಗೂ ಸರಿಯಾದ ವಿವರಗಳನ್ನು ಮಾತ್ರ ತುಂಬಿ.
- ನಂತರ ನಿಮ್ಮ ಸಿಬಿಲ್ ಸ್ಕೋರ್ ಹಾಗೂ ಇತರ ಆಧಾರಗಳ ಮೇಲೆ ಎಷ್ಟು ಹಣ ನಿಮಗೆ ಸಾಲವಾಗಿ ದೊರೆಯಲಿದೆ ಎಂಬ ವಿವರ ನಿಮಗೆ ಕಾಣಿಸುತ್ತದೆ. ಎಷ್ಟು ಬೇಕೋ ಅಷ್ಟು ಹಣವನ್ನು ಪಡೆದುಕೊಳ್ಳುವುದು ನಿಮ್ಮ ಜವಾಬ್ದಾರಿ.
- ಇದಾದ ನಂತರ ನೀವು ದಾಖಲೆಗಳನ್ನು ಸಬ್ಮಿಟ್ ಮಾಡಿ ವೇರಿಫೈ ಮಾಡುವ ಮೂಲಕ ವೈಯಕ್ತಿಕ ಸಾಲವನ್ನು ನಿಮ್ಮ ಖಾತೆಗೆ ಪಡೆದುಕೊಳ್ಳಬಹುದಾಗಿರುತ್ತದೆ.
- ನೀವು ಗೂಗಲ್ ಪೇ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ಬಯಸಿದಲ್ಲಿ ಬೇರೆ ನೀಡಲಾದಂತ ನಿಯಮಗಳು ಹಾಗೂ ಶರತ್ತುಗಳನ್ನು ನೀವು ಓದಿಕೊಂಡು ನಂತರ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಹಾಗೂ ಅದರಲ್ಲಿ ಬಡ್ಡಿಯ ದರಗಳನ್ನು ಕೂಡ ತಿಳಿಸಲಾಗಿರುತ್ತದೆ ಪೂರ್ತಿ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ನಂತರ ಗೂಗಲ್ ಪೇ ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ₹2,000 ಹಣ ಎಲ್ಲರಿಗೂ ಇವತ್ತು ಜಮಾ ಆಗಿದೆ!- ಲಕ್ಷ್ಮಿ ಹೆಬ್ಬಾಳ್ಕರ್