Gruhalakshmi: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ಪ್ರಮುಖ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಈಗಾಗಲೇ ಕೆಲವು ಮಹಿಳೆಯರ ಖಾತೆಗೆ ಜಮಾ ಆಗುತ್ತಿದ್ದು, ಕರ್ನಾಟಕದ ಕೋಟ್ಯಾಂತರ ಮಹಿಳೆಯರು ಕೂಡ ಈ ಯೋಜನೆಯ ಉಪಯೋಗವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಜೂನ್ ತಿಂಗಳಿನಲ್ಲಿ ಬಾಕಿ ಇರುವ ₹2,000 ರೂಪಾಯಿ ಹಣ ಮಹಿಳೆಯರ ಖಾತೆಗೆ ಜಮಾ ಆಗಿದ್ದು ಇದರ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ ನೋಡಿ.
ಗೃಹಲಕ್ಷ್ಮಿ (Gruhalakshmi) ಯೋಜನೆಯ ಹಣ ಯಾವ ಜಿಲ್ಲೆಗಳಿಗೆ ಮೊದಲು ಜಮ!
ಸ್ನೇಹಿತರೆ, ನಿಮಗೆ ಈ ಕೆಳಗಡೆ ಪಟ್ಟಿಯಲ್ಲಿ ಕೆಲವು ಜಿಲ್ಲೆಗಳನ್ನು ತಿಳಿಸಲಾಗಿರುತ್ತದೆ. ಕೆಳಗೆ ನೀಡಿರುವ ಜಿಲ್ಲೆಗಳಲ್ಲಿ ಮೊದಲನೆಯ ಹಂತದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವು ಜಮಾ ಮಾಡಲಾಗಿರುತ್ತದೆ.
- ಕೋಲಾರ್
- ಬೆಂಗಳೂರು
- ಚಿತ್ರದುರ್ಗ
- ಯಾದಗಿರಿ
- ಕೊಪ್ಪಳ
- ಹಾವೇರಿ
- ಬಾಗಲಕೋಟೆ
- ಗದಗ್
- ಬಳ್ಳಾರಿ
- ವಿಜಯಪುರ
- ಬೀದರ್
- ಕಲಬುರ್ಗಿ
- ಬೆಳಗಾವಿ
ಹೌದು ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ ಈಗಾಗಲೇ ಸಾಕಷ್ಟು ಜನ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಹಲವಾರು ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದ್ದು, ಹಣವು ಜಮಾ ಆಗಿರುವುದು ಸತ್ಯವಾಗಿರುತ್ತದೆ. ಇನ್ನೂ ಕೂಡ ಹಣ ಜಮಾ ಆಗಿಲ್ಲ ಅಂದ್ರೆ ಮುಂದಿನ ವಾರದ ಒಳಗಾಗಿ ನಿಮ್ಮ ಖಾತೆಗೆ ಹಣ ಜಮಾ ಆಗುವ ಎಲ್ಲಾ ಸಾಧ್ಯತೆ ಇರುತ್ತದೆ. ಹೀಗೆ ಹಂತ ಹಂತವಾಗಿ ಎಲ್ಲ ಜಿಲ್ಲೆಗಳಿಗೆ ಗೃಹಲಕ್ಷ್ಮಿ (Gruhalakshmi) ಯೋಜನೆ ಹಣವನ್ನು ಜಮಾ ಮಾಡಲಾಗುತ್ತದೆ. ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
ಹೌದು ಸ್ನೇಹಿತರೆ, ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವಂತಹ ಲಕ್ಷ್ಮಿ ಹೆಬ್ಬಾಳಕರ್ ಅವರು ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ತಾಂತ್ರಿಕ ದೋಷದಿಂದ ಜಮಾ ಆಗಿರುವುದಿಲ್ಲ. ಆದ್ದರಿಂದ ಇನ್ನು ಕೆಲವು ದಿನಗಳಲ್ಲಿ ಗೃಹಲಕ್ಷ್ಮಿ (Gruhalakshmi) ಯೋಜನೆಯ ಹಣ ಮಹಿಳೆಯರ ಖಾತೆಗೆ ತಲುಪಲಿದೆ ಎಂಬ ಸ್ಪಷ್ಟನೆಯನ್ನು ನೀಡಿರುತ್ತಾರೆ.
ನಿಮ್ಮ ಖಾತೆಗೆ ಹಣ ಜಮಾ ಆಗಿದೀವ ಇಲ್ಲವಾ ಎಂದು ತಿಳಿದುಕೊಳ್ಳಲು ನೀವು ಪ್ಲೇ ಸ್ಟೋರ್ ನಿಂದ “ಡಿ ಬಿ ಟಿ ಕರ್ನಾಟಕ” ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಬಹುದಾಗಿರುತ್ತದೆ.