Home Loan: ನಮಸ್ಕಾರ ಎಲ್ಲರಿಗೂ, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಸರ್ಕಾರವು ಹಲವಾರು ಯೋಜನೆಗಳ ಮೂಲಕ ಸಹಾಯಕವಾಗುತ್ತಿದೆ. ಇದೀಗ ಕೇಂದ್ರ ಸರ್ಕಾರದಿಂದ ಮನೆ ಅಥವಾ ಬಾಡಿಗೆ ಮನೆಗಳಲ್ಲಿ ವಾಸಿಸುವಂತಹ ನಗರ ಪ್ರದೇಶಗಳಲ್ಲಿ ಹಾಗೂ ಕುಟುಂಬಗಳಲ್ಲಿ ವಾಸಿಸುವ ಜನರಿಗೆ ಪ್ರಧಾನ ಮಂತ್ರಿ ಗೃಹ ಸಾಲ ಸಬ್ಸಿಡಿ ಎಂಬ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ.
ಸ್ನೇಹಿತರೆ, ನೀವೇನಾದರೂ ನಗರದ ಪ್ರದೇಶದ ನಿವಾಸಿಗಳಾಗಿದ್ದರೆ ಸರ್ಕಾರದ ವತಿಯಿಂದ ನೀಡುವ ಸಾಲವನ್ನು ಕೂಡ ನೀವು ಪಡೆಯಲು ಬಯಸಿದರೆ, ಈ ಮಾಹಿತಿ ನಿಮಗಾಗಿ. ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ನೀವು ಸರ್ಕಾರದಿಂದ ಪಡೆದಿರುವಂತಹ ಸಾಲಕ್ಕೆ 3% ರಿಂದ 6.5% ವರೆಗೆ ಬಡ್ಡಿಯನ್ನು ಮಾತ್ರ ನೀವು ಪಾವತಿಸಬೇಕು. ಈ ಯೋಜನೆಯ ಲಾಭವನ್ನು ಸರ್ಕಾರವು ದೇಶದ 25 ಲಕ್ಷ ಫಲಾನುಭವಿಗಳಿಗೆ ನೀಡಲಿದೆ ಎಂದು ತಿಳಿಸಲಾಗಿದೆ. ಸದ್ಯಕ್ಕೆ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಗರಿಷ್ಠ 20 ವರ್ಷಗಳಿಗೆ ಸಾಲ ಸೌಲಭ್ಯವನ್ನು ನೀಡಲಾಗುವುದು ಎಂದು ತಿಳಿದು ಬಂದಿರುತ್ತದೆ.
ಸಾಲ ಪಡೆಯಲು ಅರ್ಹತೆಗಳು:
- ಭಾರತದ ನಿವಾಸಿಯಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
- ಈ ಯೋಜನೆಯ ಉಪಯೋಗವನ್ನು ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ನೀಡಲಾಗುವುದು.
- ಅರ್ಜಿ ಸಲ್ಲಿಸಲು ಬಯಸುವ ವ್ಯಕ್ತಿಯು ಯಾವುದೇ ಬ್ಯಾಂಕ್ ಡಿಫಾಲ್ಟರ್ ಎಂದು ಘೋಷಿಸಿದ್ದರೆ, ಸಾಲ ಪಡೆಯುವುದು ಇನ್ನಷ್ಟು ಸುಲಭ.
ಸಾಲ ಪಡೆಯಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಆದಾಯ ಪ್ರಮಾಣ ಪತ್ರ
- ಇಮೇಲ್ ಐಡಿ
ಯಾವಾಗ ಅರ್ಜಿಗಳು ಆರಂಭ.?
ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಏಕೆಂದರೆ ಶೀಘ್ರದಲ್ಲಿ ಕ್ಯಾಬಿನೆಟ್ ನಲ್ಲಿ ಈ ಯೋಜನೆಯ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ತಿಳಿದುಬಂದಿರುತ್ತದೆ. ಈ ಯೋಜನೆಗೆ ಅನುಮೋದನೆ ದೊರೆತ ನಂತರ ಐದು ವರ್ಷಗಳಲ್ಲಿ 25 ಲಕ್ಷ ಅರ್ಜಿದಾರರಿಗೆ ಈ ಯೋಜನೆಯ ಲಾಭವನ್ನು ಒದಗಿಸಿಕೊಡಲಿದೆ.