Kisan Samman Nidhi: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಈ ಒಂದು ಲೇಖನದಲ್ಲಿ ನಮ್ಮ ಭಾರತ ದೇಶದ ಪ್ರಧಾನ ಮಂತ್ರಿ ಆಗಿರ್ತಕ್ಕಂತ ನರೇಂದ್ರ ಮೋದಿಜಿ ಅವರು ನಿಮಗೆ ತಿಳಿದಿರುವ ಹಾಗೆ ರೈತರ ಮೇಲೆ ಬಹಳಷ್ಟು ಕಾಳಜಿ ವಹಿಸುವಂತಹ ಒಬ್ಬ ಪ್ರಧಾನಿ ಎಂದು ಹೇಳಲಾಗುತ್ತದೆ.
ತಮ್ಮ ಎಲ್ಲ ಯೋಜನೆಗಳನ್ನು ರೈತರ ಉಪಯೋಗಕ್ಕಾಗಿ ಜಾರಿ ಮಾಡಿದ್ದಾರೆ ಎಂದು ಹೇಳಿದರೂ ಸುಳ್ಳಾಗದು ಏಕೆಂದ್ರೆ ಹಿಂದಿನ ವರ್ಷದಲ್ಲಿ ಹಲವಾರು ರೈತರಿಗೆ ಉಪಯೋಗಗಳನ್ನು ಮಾಡಿದ್ದಾರೆ, ಅದೇ ರೀತಿಯಾಗಿ ಈ ವರ್ಷವೂ ಕೂಡ ರೈತರಿಗೆ ಹಲವಾರು ಉಪಯೋಗ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಅದರಲ್ಲಿ ಒಂದಾದ ಪಿಎಂ ಕಿಸಾನ್ ಸನ್ಮಾನ್ಯಧಿ ಯೋಜನೆ ಕೂಡ ಆಗಿದೆ.
ಈ ಒಂದು ಯೋಜನೆ ಅಡಿಯಲ್ಲಿ ರೈತರ ಖಾತಿಗೆ ನೇರವಾಗಿ ಒಂದು ವರ್ಷಕ್ಕೆ ಆರು ಸಾವಿರ ಹಣವನ್ನು ಬಿಡುಗಡೆ ಮಾಡತಕ್ಕಂತಹ ಈ ಒಂದು ಯೋಜನೆಯಾಗಿದ್ದು, ಅಂದರೆ ವರ್ಷಕ್ಕೆ ಮೂರು ಬಾರಿ ಎರಡೆರಡು ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ನೇರವಾಗಿ ಹಾಕಲಾಗುತ್ತದೆ. ಈ ಒಂದು ಯೋಜನೆಯನ್ನು 2018ರಲ್ಲಿ ಪ್ರಾರಂಭ ಮಾಡಲಾಯಿತು.
ಈ ಯೋಜನೆಯನ್ನು ಆರ್ಥಿಕವಾಗಿ ಹಿಂದೆ ಉಳಿದ ರೈತರಿಗೆ ಇನ್ನಷ್ಟು ಹೆಚ್ಚಿನ ಸಹಾಯ ಮಾಡಲು ವರ್ಷಕ್ಕೆ ಆರು ಸಾವಿರ ರೂಪಾಯಿ ನೀಡುವುದರ ಮೂಲಕ ರೈತರಿಗೆ ಇನ್ನಷ್ಟು ಉಪಯೋಗ ಮಾಡಲು ಈ ಒಂದು ಯೋಜನೆಯನ್ನು ಜಾರಿಗೆ ತರಲಾಯಿತು, ಇತ್ತೀಚಿನ ದಿನಮಾನಗಳಲ್ಲಿ ಈ ಒಂದು ಯೋಜನೆಯಿಂದ ಕೆಲವಷ್ಟು ರೈತರನ್ನು ಹೊರ ಹಾಕಲಾಗಿದ್ದು ಹಾರೈತರು ಯಾರು ಎಂಬುದನ್ನು ಈ ಒಂದು ವಿಷಯದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಪಿಎಂ ಕಿಸನ್ ಯೋಜನೆಯಿಂದ ಹೊರಹಾಕಲಾದ ರೈತರು:
- ನಿಮ್ಮ ಕುಟುಂಬದಲ್ಲಿ ಏನಾದ್ರು ಸರ್ಕಾರಿ ನೌಕರಿ ಮಾಡುತ್ತಾರೆ ಅಂತವರು ಈ ಒಂದು ಯೋಜನೆಗೆ ಯೋಗ್ಯವಾಗಿರುವುದಿಲ್ಲ.
- ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುತ್ತಿದ್ದಲ್ಲಿ ಅಂತ ರೈತರಿಗೂ ಈ ಒಂದು ಯೋಜನೆಯಲ್ಲಿ ಹಣ ಸಿಗುವುದಿಲ್ಲ.
- ಯಾವುದಾದರೂ ಕೆಲಸದಲ್ಲಿ ನಿವೃತ್ತಿ ಹೊಂದಿ ಹತ್ತು ಸಾವಿರ ಪೆನ್ಷನ್ ಪಡೆಯುತ್ತಿರುವ ವ್ಯಕ್ತಿಗಳಿಗೂ ಈ ಒಂದು ಯೋಜನೆಯಲ್ಲಿ ಯೋಗ್ಯವಾಗಿರುವುದಿಲ್ಲ.
- ಡಾಕ್ಟರ್, ಇಂಜಿನಿಯರ್, ಲಾಯರ್ ನಿಮ್ಮ ಕುಟುಂಬದಲ್ಲಿ ಇದ್ದರೆ ಇಂಥವರಿಗೂ ಸಹ ಈ ಒಂದು ಯೋಜನೆ ಯೋಗ್ಯವಾಗಿರುವುದಿಲ್ಲ.
- ಸಂಸ್ಥೆಯ ಮಾಲೀಕರು ಸಹ ಈ ಒಂದು ಯೋಜನೆಗೆ ಯೋಗ್ಯವಾಗಿರುವುದಿಲ್ಲ.