Annabhagya: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕರ್ನಾಟಕ ಸರ್ಕಾರವು 5 ಕೆಜಿ ಅಕ್ಕಿ ಹಣ ಕೊಟ್ಟು ಬದಲಿಗೆ ಉಳಿದ 5 ಕೆಜಿ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿತ್ತು ಹಣದ ಬದಲು ಅಕ್ಕಿಯನ್ನು ನೀಡುತ್ತೇವೆ ಎಂದು ಇದೀಗ ಮಾಹಿತಿ ತಿಳಿದು ಬಂದಿರುತ್ತದೆ. ಇದರ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ನಿಮ್ಮ ಮೊಬೈಲ್ ಮೂಲಕವೇ ಹಣ ಚೆಕ್ ಮಾಡಿಕೊಳ್ಳಿ!
ಸ್ನೇಹಿತರೆ, ಅನ್ನ ಭಾಗ್ಯ ಯೋಜನೆಯ ಕುರಿತು ಕರ್ನಾಟಕ ಸರ್ಕಾರದ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿರುವಂತಹ ಕೆ.ಎಚ್ ಮುನಿಯಪ್ಪನವರು ಇದೀಗ ಕೇಂದ್ರ ಸರ್ಕಾರದ ಆಹಾರ ಮಂತ್ರಿಯ ಜೊತೆಗೆ ಮಂಗಳವಾರ ಮಾತನಾಡಿರುತ್ತಾರೆ. ಸಭೆಯಲ್ಲಿ ಅಕ್ಕಿಯನ್ನು ನೀಡುವುದಾಗಿ ಕೇಂದ್ರ ಸರ್ಕಾರವು ಒಪ್ಪಿಕೊಂಡಿದೆ ಎಂದು ಹೇಳಬಹುದು. ಈ ಒಂದು ಮಾಹಿತಿಯನ್ನು ಹಿನ್ನೆಲೆಯಾಗಿ ಅಕ್ಕಿಯು ಪೂರೈಕೆಯಾಗುತ್ತಿದ್ದಂತೆಯೇ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡುವುದು ನಿಲ್ಲಿಸಲಾಗುವುದು ಎಂದು ತಿಳಿದುಬಂದಿದೆ.
ಹಣದ ಬದಲಿಗೆ 10 ಕೆಜಿ ಅಕ್ಕಿ!! (Annabhagya)
ಹೌದು ಸ್ನೇಹಿತರೆ, ಈ ಒಂದು ಮಾಹಿತಿ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿರುವ ಕೆ ಎಸ್ ಮುನಿಯಪ್ಪನವರು ಅನ್ನಭಾಗ್ಯ ಯೋಜನೆ ಹಣದ ಕುರಿತಾಗಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರವು ಅಕ್ಕಿಯನ್ನು ಮಾರಾಟ ಮಾಡಲು ಒಪ್ಪಿಕೊಂಡಿರುತ್ತದೆ ಎಂದು ತಿಳಿದುಬಂದಿದೆ.
ಹಾಗಾಗಿ ಅಕ್ಕಿಯನ್ನು ನೀಡುತ್ತೇವೆ ಎಂದು ಸಚಿವರು ತಿಳಿಸಿರುತ್ತಾರೆ. ಒಂದು ತಿಂಗಳಿಗೆ 20,000 ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ ಕೇಂದ್ರ ಸರ್ಕಾರವು ಹಕ್ಕಿಯನ್ನು ನೀಡಲು ಪ್ರಾರಂಭಿಸಿದ ಫಲಾನುಭವಿಗಳಿಗಾಗಿ ಸಂಪೂರ್ಣವಾಗಿ 10 ಕೆಜಿ ಅಕ್ಕಿ ನೀಡಲಿದ್ದಾರೆ ಎಂದು ತಿಳಿಸಲಾಗಿದೆ.
ಹೌದು ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ 5 ಕೆ.ಜಿ ಅಕ್ಕಿಯ ಬದಲಿಗೆ ಅದರ ಹಣವನ್ನು ಕರ್ನಾಟಕ ರಾಜ್ಯದ ಅನ್ನಭಾಗ್ಯ (Annabhagya) ಯೋಜನೆಯ ಫಲಾನುಭವಿಗಳಿಗೆ ಕರ್ನಾಟಕ ಸರ್ಕಾರವು ನೀಡುತ್ತಿತ್ತು, ತಲ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ 180ಗಳನ್ನು ರಾಜ್ಯದ ಜನರ ಖಾತೆಗೆ ನೀಡಲಾಗುತ್ತಿತ್ತು ಎಂದು ನಿಮಗೆಲ್ಲ ಗೊತ್ತೇ ಇದೆ. ಒಂದು ಕುಟುಂಬದ ಯಜಮಾನೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣವನ್ನು ನೀಡಲಾಗುತ್ತಿತ್ತು ಎಂದು ನಿಮಗೆಲ್ಲ ಗೊತ್ತಿದೆ.
ಇದನ್ನೂ ಓದಿ: ಯೂನಿಯನ್ ಬ್ಯಾಂಕ್ 15 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ, ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಿರಿ.!
ಓದುಗರ ಗಮನಕ್ಕೆ: ಸ್ನೇಹಿತರೆ, ಈ ಮಾಹಿತಿಯು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದು ಬಂದಿರುತ್ತದೆ. ಹಾಗೂ ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇತ್ತೀಚಿನ ಮಾಧ್ಯಮಗಳನ್ನು ನೀವು ವೀಕ್ಷಿಸಬಹುದಾಗಿರುತ್ತದೆ. ಇನ್ನು ಮೇಲೆ 5 ಕೆ.ಜಿ ಅಕ್ಕಿಯ ಬದಲಾಗಿ 10 ಕೆಜಿ ಅಕ್ಕಿಯನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಇನ್ನು ಮೇಲೆ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗುವುದಿಲ್ಲ.