Gruhalakshmi Scheme: ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಇದೇ ತಿಂಗಳ ಒಳಗಾಗಿ ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣವನ್ನು ಒಟ್ಟಿಗೆ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಅವರು ತಿಳಿಸಿರುತ್ತಾರೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
ಈಗಾಗಲೇ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ₹2,000 ಹಣ ಜಮಾ ಆಗಿದೆ ಇದರ ಸ್ಟೇಟಸ್ ಅನ್ನು ನೀವು ಕೆಳಗಡೆ ಈ ರೀತಿಯಾಗಿ ಚೆಕ್ ಮಾಡಿಕೊಳ್ಳಬಹುದು.
ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿದೆಯಾ ಅಥವಾ ಇಲ್ಲವಾ ಎಂದು ಚೆಕ್ ಮಾಡಿಕೊಳ್ಳಲು ನಿಮ್ಮ ಬ್ಯಾಂಕಿಗೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಮೊಬೈಲ್ ನಲ್ಲಿಯೇ “ಡಿ ಬಿ ಟಿ ಕರ್ನಾಟಕ” ಎಂಬ ಅಪ್ಲಿಕೇಶನ್ ಮುಖಾಂತರ ನೀವು ಗೃಹಲಕ್ಷ್ಮಿ ಯೋಜನೆಯ ಹಣ ಆಗಿದೆಯಾ ಇಲ್ಲವಾ ಎಂದು ಮಾಹಿತಿ ಪಡೆಯಬಹುದಾಗಿರುತ್ತದೆ.
ಸ್ನೇಹಿತರೆ, ಈಗಾಗಲೇ ನಿಮಗೆ ತಿಳಿದಿರುವ ಹಾಗೆ, ಗೃಹಲಕ್ಷ್ಮಿ ಯೋಜನೆಯ ಜುಲೈ ತಿಂಗಳ ಹಣ ಮಹಿಳೆಯರ ಖಾತೆಗೆ ಜಮಾ ಆಗಿರುತ್ತದೆ ಮೊದಲ ಹಂತದಲ್ಲಿ ಕೋಲಾರ, ಕೊಪ್ಪಳ, ಯಾದಗಿರಿ, ಗದಗ, ಹಾವೇರಿ, ವಿಜಯಪುರ, ಬಳ್ಳಾರಿ, ಕಲಬುರ್ಗಿ, ಬೀದರ್, ಬೆಳಗಾವಿ, ಬಾಗಲಕೋಟೆ, ಬೆಂಗಳೂರು, ಚಿತ್ರದುರ್ಗ ಈ ಜಿಲ್ಲೆಗಳಿಗೆ ಹಣ ಜಮಾವಾಗುವ ವ್ಯವಸ್ಥೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.
ಸ್ನೇಹಿತರೆ, ಕಾಂಗ್ರೆಸ್ ಜನಂದೋಲನ ಕಾರ್ಯಕ್ರಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಮಾಹಿತಿಯನ್ನು ತಿಳಿಸಿ ಕೊಟ್ಟಿರುತ್ತಾರೆ. ಕೆಲವು ತಾಂತ್ರಿಕ ದೋಷದಿಂದ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಜಮಾ ಆಗುವುದು ವಿಳಂಬವಾಗಿರುತ್ತದೆ. ₹4,000 ಒಟ್ಟಿಗೆ ಹಣವನ್ನು ಜಮಾ ಮಾಡಲಾಗುತ್ತದೆ. ಇಂದಿನಿಂದ ಎಲ್ಲಾ ಮಹಿಳೆಯರ ಖಾತೆಗೆ ₹4,000 ರೂಪಾಯಿ ಹಣ ಜಮಾ ಮಾಡುವಾಗ ವ್ಯವಸ್ಥೆ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಅವರು ತಿಳಿಸಿರುತ್ತಾರೆ. ಆದ್ದರಿಂದ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಬಹುದು.