Gruhalakshmi Yojana Update: ನಮಸ್ಕಾರ ಎಲ್ಲಾ ಕನ್ನಡಿಗರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಐದು ಯೋಜನೆಗಳನ್ನು ಜಾರಿಗೊಳಿಸಿದೆ ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು ಈ ಯೋಜನೆಯು ಮಹಿಳೆಯರಿಗೆ ಪ್ರತಿ ತಿಂಗಳು ₹2000ರೂ. ನೀಡುವುದಾಗಿ ಇದರ ಉದ್ದೇಶ ಈಗಾಗಲೇ 10ನೇ ಕಂತಿನ ಹಂತದವರೆಗೂ ಎಲ್ಲಾ ಫಲಾನುಭವಿಗಳಿಗೆ ತಲುಪಿದೆ ಎಂದು ಹೇಳಬಹುದು ಆದರೆ ಕೆಲವು ಮಹಿಳೆಯರಿಗೆ ಹಣ ಜಮಾ ಆಗಿಲ್ಲ ಅಂತವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಮಾಹಿತಿಯನ್ನು ನೀಡಿದ್ದಾರೆ.
ಅದರ ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಹಣ ಇನ್ನೂ ಕೂಡ ಬಿಡುಗಡೆ ಮಾಡಿಲ್ಲ ಇನ್ನೂ ಎರಡು ಅಥವಾ ಮೂರು ದಿನಗಳಲ್ಲಿ ಹಣವನ್ನು ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ ಆದರೆ ಇದಕ್ಕಿಂತ ಹಿಂದಿನ ಕಂತಿನ ಹಣ ಜಮಾ ಆಗಿದೆ ಇದ್ದರೆ ಅಂತಹ ಮಹಿಳೆಯರು ಈ ಕೆಲಸವನ್ನು ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
Gruhalakshmi Yojana Update: ಗೃಹಲಕ್ಷ್ಮಿ ಯೋಜನೆಯು ಹಣ ಬರದೆ ಇದ್ದರೆ ಏನು ಮಾಡಬೇಕು?
- ನೀವು ಗೃಹಲಕ್ಷ್ಮಿ ಹಣ ಪಡೆಯ ಬೇಕಾದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿರುವಂತಹ ಪ್ರತಿಯೊಬ್ಬ ಸದಸ್ಯರ ಇ – ಕೆ ವೈ ಸಿ ಕಡ್ಡಾಯವಾಗಿ ಮಾಡಿಸಬೇಕು.
- ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಕೊಂಡಿರುವ ಮಹಿಳೆಯರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಈ – ಕೆ ವೈ ಸಿ ಮಾಡಿಸಬೇಕು.
- NPCI ಕೂಡ ನೀವು ಮಾಡಿಸಬೇಕು.
- ಇದರ ಜೊತೆಗೆ ಗೃಹಲಕ್ಷ್ಮಿ ಫಲಾನುಭವಿಗಳು ಈ – ಕೆ ವೈ ಸಿ ಮತ್ತು ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸಬೇಕು.
- ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.
- ಬ್ಯಾಂಕ್ ಖಾತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹಸಿಕೊಳ್ಳಿ.
- ನಿಮ್ಮ ಆಧಾರ್ ಕಾರ್ಡ್ ಗೆ ಚಾಲ್ತಿಯಲ್ಲಿರುವ ಮುಬೈಲ ನಂಬರ್ ಲಿಂಕ್ ಮಾಡಿಸಿ.
ಈ ಮೇಲಿನ ಎಲ್ಲಾ ಕೆಲಸಗಳನ್ನು ನೀವು ಕಡ್ಡಾಯವಾಗಿ ಪಾಲಿಸಿದರೆ ನಿಮಗೆ ಖಂಡಿತ ವಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ.