Guarantee Schemes: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಈ ಒಂದು ಲೇಖನದಲ್ಲಿ ಎಲ್ಲರಿಗೂ ತಿಳಿಸುವುದೇನೆಂದರೆ ಕಳೆದ ಬಾರಿ ಕರ್ನಾಟಕ ರಾಜ್ಯದಲ್ಲಿ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರಲು ಪ್ರಮುಖವಾದವು ಐದು ಗ್ಯಾರಂಟಿ ಯೋಜನೆಗಳು, ಅದೇ ರೀತಿಯಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ ಯೋಜನೆಗಳಂತೆ ಯಾವಾಗಲೂ ಸಹ ಯೋಜನೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳ ಕಹಿ ಸುದ್ದಿ:
ಇತ್ತೀಚಿನ ದಿನಮಾನಗಳಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ವಲ್ಪ ನಿಧಾನವಾಗಿದೆ ಅಂದು ಹೇಳಬಹುದು, ಒಂದು ಮಾಹಿತಿಯ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಆತ್ಮೀಯ ಸಲಹೆಗಾರ ಬಸವರಾಜ್ ರಾಯರೆಡ್ಡಿ ಈ ಸಂದರ್ಭದಲ್ಲಿ ಮಾಹಿತಿಯನ್ನು ನೀಡಿದ್ದಾರೆ ಬನ್ನಿ ಇದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಈ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರಕ್ಕೆ ತುಂಬಾನೇ ಆರ್ಥಿಕ ಹೊರೆ ಆಗಿದೆ ಎಂದು ಹೇಳಬಹುದು ಅಂದರೆ ಸರ್ಕಾರವು ಏನು ದಿವಾಳಿ ಆಗಿಲ್ಲ ಎಂದು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ, ಬಸವರಾಜ್ ರಾಯರೆಡ್ಡಿ ಅವರು ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಮುಖ ಐದು ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬಸವರಾಜ್ ರಾಯರೆಡ್ಡಿ ಅವರು ಈ ಬಾರಿ ಕೇಂದ್ರ ಸರ್ಕಾರದ ಬಜೆಟ್ ಮಂಡಳಿ ವಿರುದ್ಧ ಕಿಡಿ ಕಾರುವಂತ ಅವರು ಕರ್ನಾಟಕ ರಾಜ್ಯದ ಬಗ್ಗೆ ಸ್ವಲ್ಪಾನೂ ಕಾಳಜಿ ಇಲ್ಲವೆಂದು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ, ಅದೇ ರೀತಿಯಾಗಿ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಯಾವುದೇ ರೀತಿಯಾದ ಕರ್ನಾಟಕ ಹೆಸರನ್ನು ಎತ್ತಿಲ್ಲವೆಂದು ಬಸವರಾಜ್ ರಾಯರೆಡ್ಡಿ ಅವರು ತಿಳಿಸಿದ್ದಾರೆ.
ಇನ್ನು ಹೇಳೋದಾದ್ರೆ ಪ್ರತಿ ತಿಂಗಳು ಸಾವಿರಾರು ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಂದ ಹಣವು ಖಾಲಿ ಆಗ್ತಿದೆ ಹೊರತು ನಮ್ಮ ಕರ್ನಾಟಕ ರಾಜ್ಯ ಹಣ ಇಲ್ಲದೆ ದಿವಾಳಿ ಆಗಿಲ್ಲವೆಂದು ಬಸವರಾಜ್ ರಾಯರೆಡ್ಡಿ ಅವರು ಹೆಮ್ಮೆಯಿಂದ ವ್ಯಕ್ತಪಡಿಸಿದ್ದಾರೆ, ಇವರ ಒಂದು ಮಾತು ಕೇಳ್ತಾ ಇದ್ರೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಕರ್ನಾಟಕಕ್ಕೆ 17000 ಕೋಟಿ ಅನುದಾನ ಬರದೆ ಹೋದರೆ ಗ್ಯಾರಂಟಿ ಯೋಜನೆಗಳ ಮೇಲೆ ತುಂಬಾನೇ ಪರಿಣಾಮ ಬೀರಬಹುದು ಅಥವಾ ಬಂದ್ ಕೂಡ ಆಗಬಹುದು.