HSRP NUMBER PLATE: ನಂಬರ್ ಪ್ಲೇಟ್ ಹಾಕಿಸಿದ್ರು ಕೂಡ ಬೀಳುತ್ತೆ ದಂಡ..!!

ನಮಸ್ಕಾರ ಎಲ್ಲಾ ಕನ್ನಡದ ಸಮಸ್ತ ಜನತೆಗೆ: ವಾಹನ ಸವಾರರಿ ಗೆHSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಸೇಕಡಾ15% ರವರೆಗೆ ವಿಸ್ತರಣೆ ಮಾಡಲಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತವಾದ ಆದೇಶವನ್ನು ಹೊರಡಿಸಿದೆ.

ಈ ಹಿಂದೆ ಎಲ್ಲಾ ಹಳೆಯ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆಗೆ ಜೂನ್ 12 ರ ವರೆಗೆ ಅವಕಾಶವನ್ನು ನೀಡಲಾಗಿತ್ತು ಆದರೆ ನಂತರ ಜುಲೈ 4 ರ ವರೆಗೆ ವಿಸ್ತರಣೆಯನ್ನು ಮಾಡಲಾಗಿತ್ತು ಇದೀಗ ಸೇಕಡಾ 15% ರವರೆಗೆ ವಿಸ್ತರಣೆಯನ್ನು ಮಾಡಿ ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿಸುದ್ದಿ ನೀಡಿದೆ.

ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ ಹಳೆಯ ಅಸ್ತಿತ್ವದಲ್ಲಿರುವಂತ ವಾಹನಗಳು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಲಘು ಮೋಟಾರು ವಾಹನಗಳು ಪ್ರಯಾಣಿಕ ಕಾರುಗಳು ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು ಟ್ರೈಲರ್ ಟ್ರಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತವಾಗಿ ನೋಂದಣಿ ಫಲಕಗಳನ್ನು HSRP ನಂಬರ್‌ಪ್ಲೇಟ್‌ ಅಳವಡಿಸುವುದು ಕಡ್ಡಾಯವಾಗಿದೆ.

HSRP ನಂಬರ್ ಪ್ಲೇಟ್ ಹಾಕೊಂಡ್ರು ಕೂಡ ಬೀಳುತ್ತೆ ದಂಡ:

HSRP ನಂಬರ್ ಪ್ಲೇಟ್ ಅಳವಡಿಕೆಯನ್ನು ಮಾಡಿದ್ದರೂ ಕೂಡ ನಿಮಗೆ ದಂಡ ಬೀಳತ್ತೆ. ಹೌದು, ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆ ಆದ ನಂತರ ನಂಬರ್ ಪ್ಲೇಟ್ ಮೇಲೆ ಯಾವುದೇ ರೀತಿಯ ಸ್ಟಿಕರ್ ಅನ್ನು ಹಾಕಿಸುವಂತಿಲ್ಲ ಅಂದರೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಮೇಲೆ ಯಾವುದೇ ರೀತಿಯ ಬರಹಗಳಾಗಲಿ ಅಥವಾ ಸಿನಿಮಾ ನಟರ ಫೋಟೋ ಗಳು ನಂಬರ್ ಪ್ಲೇಟ್ ಮೇಲೆ ಅಳವಡಿಸುವಂತಿಲ್ಲ ಒಂದು ವೇಳೆ ಹೀಗೆ ಮಾಡಿದ್ದೇ ಆದಲ್ಲಿ ಅಂತಹ ವಾಹನಗಳಿಗೆ ಸವಾರರಿಗೂ ಕೂಡ ದಂಡದ ಬಿಸಿ ಮುಟ್ಟಲ್ಲಿದೆ ಹೀಗಾಗಿ ವಾಹನ ಸವಾರರರು ನಂಬರ್ ಪ್ಲೇಟ್ ಮೇಲೆ ಯಾವುದೇ ರೀತಿಯ ಬರಹ ಸ್ಟಿಕರ್ ಅಂಟಿಸಬೇಡಿ.

ಇನ್ನು ಅಳವಡಿಕೆ ಮಾಡದೇ ಇರುವವರಿಗೂ ಗಡುವು ಮುಗಿದ ನಂತರವೂ ದಂಡ ಕಟ್ಟಬೇಕಾಗುತ್ತದೆ ಹೀಗಾಗಿ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇದ್ದಲ್ಲಿ ಅಂತಹ ವಾಹನದ ಸವಾರರು ಈಗಲೇ ನಂಬರ್ ಪ್ಲೇಟ್ ಮಾಡಿಸಿಕೊಳ್ಳಿ.

ಧನ್ಯವಾದಗಳು

Leave a Comment

error: Don't Copy Bro !!