ಮುಂಗಾರು ಬೆಳೆ ವಿಮೆ 2024 – 25 ಅರ್ಜಿ ಪ್ರಾರಂಭ! ಅಧಿಸೂಚಿತ ಬೆಳೆಗಳ ಪಟ್ಟಿ ಇಲ್ಲಿದೆ… Kharif Season Crop Insurance 2024

Kharif Season Crop Insurance: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ಫಸಲ್ ಬಿಮಾ ವಿಮಾ ಯೋಜನೆಯಡಿ 2024-25ನೇ ಸಾಲಿನ ಮುಂಗಾರುಮಳೆ ಹಂಗಾಮಿನ ಬೆಳೆವಿಮಾ ಪ್ರಕ್ರಿಯೆ ಆರಂಭವಾಗಿದೆ, ಯಾವ ಬೆಳೆ ಮತ್ತು ಕೊನೆಯ ದಿನಾಂಕ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ರೈತ ಸುರಕ್ಷಿತ ಪ್ರಧಾನಮಂತ್ರಿ ಫಸಲ್ ಬಿಮಾ ವಿಮಾ ಯೋಜನೆಯಡಿ 2023-24ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗಾಗಿ ರೈತರು ಅಧಿಸೂಚಿತ ಬೆಳೆಗಳಿಗೆ ವಿಮೆಯನ್ನು ಮಾಡಿಸಲು ಅರ್ಜಿಯನ್ನು ಕರೆಯಲಾಗಿದೆ. ಆಸಕ್ತ ರೈತರು ನಿಗದಿಸಿದ ದಿನಾಂಕದೊಳಗೆ ಹೊಗಿ ಬೆಳೆವಿಮೆ ಪಾವತಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

Crop Insurance News 2024

ಬೆಳೆ ವಿಮೆ ಯೋಜನೆ 2024 | Crop Insurance

ಹೊದ ವರ್ಷ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ರಾಜ್ಯಾದ್ಯಂತ ಭೀಕರ ಬರಗಾಲದಿಂದ ಆವರಿಸಿತ್ತು ರಾಜ್ಯದ ಬಹುತೇಕ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿದ್ದವು, ಈ ವರ್ಷ ಮುಂಗಾರು ಮಳೆ ಸಮೃದ್ಧವಾಗಿದೆ ಎಂಬ ಮಾಹಿತಿ ಇದೆಯಾದರೂ ಪ್ರಕೃತಿ ವಿಕೋಪಗಳನ್ನು ನಿಖರವಾಗಿ ಅಂದಾಜಿಸುವುದು ಕಷ್ಟಕರವಾಗಿದೆ. ಹೀಗಾಗಿ ರೈತರು ಕನಿಷ್ಟಪಕ್ಷ ಮೊತ್ತ ಪಾವತಿಸಿ ಬೆಳೆವಿಮೆ ನೋಂದಣಿಯನ್ನು ಮಾಡಿದರೆ ಮುಂಗಾರು ಬೆಳೆನಷ್ಟ ಪರಿಹಾರವನ್ನು ಪಡೆಯಲು ಅನುಕೂಲವಾಗುತ್ತದೆ.

ಬೆಳೆ ವಿಮೆ ಯೋಜನೆಯಡಿ ಮಳೆ ಹೆಚ್ಚಾಗಿಯೊ ಕಮ್ಮಿಯಾಗಿಯೋ ಬೆಳೆನಷ್ಟವಾದಲ್ಲಿ ನಷ್ಟವಾದ ಬೆಳೆಗೆ ಅನುಗುಣವಾದ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ, ಬೆಳೆ ಕಟಾವು ಮಾಡಿದ ನಂತರ ಎರಡು ವಾರದೊಳಗೆ ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆ ಯಿಂದಾಗಿ ಬೆಳೆ ನಾಶವಾದರೆ. ನಷ್ಟ ಪರಿಹಾರವನ್ನು ನೀಡಲಾಗುತ್ತದೆ, ಜತೆಗೆ ವಿವಿಧ ಪ್ರಕೃತಿ ವಿಕೋಪದ ಬೆಳೆನಷ್ಟ ಪರಿಹಾರಗಳು ಸಿಗಲಿದೆ.

ಬೆಳೆ ವಿಮೆ ಮಾಡಿಸಲು ಆಸಕ್ತಿ ಇಲ್ಲದಂತಹ ರೈತರು ಏನು ಮಾಡಬೇಕು: Kharif Season Crop Insurance

ಬೆಳೆ ಸಾಲವನ್ನು ಪಡೆದಂತಹ ರೈತರಿಗೆ ಈ ಯೋಜನೆ ಕಡ್ಡಾಯವಾಗಿದೆ, ಒಂದು ವೇಳೆ ಬೆಳೆಸಾಲವನ್ನು ಪಡೆದ ರೈತರು ಈ ಯೋಜನೆಯಡಿ ವಿಮೆಯನ್ನು ಮಾಡಿಸಲು ಇಚ್ಛಿಸದಿದ್ದರೆ ತಾವು ಬೆಳೆಸಾಲವನ್ನು ಪಡೆದ ನಂತರ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆಯ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪಾತ್ರವನ್ನು ನೀಡಬೇಕು ಆಗ ಅವರನ್ನು ಈ ಯೋಜನೆಯಿಂದ ಕೈಬಿಡಲಾಗುತ್ತದೆ.

ಬೆಳೆ ಸಾಲವನ್ನು ಪಡೆದಂತಹ ಯೋಜನೆಯ ಐಚ್ಛಿಕವಾಗಿರುತ್ತದೆ ಆಸಕ್ತಿ ಇದ್ದು ಬೆಳೆವಿಮೆಯನ್ನು ಪಾವತಿಸಬಹುದು ಆಸಕ್ತಿ ಇರದಿದ್ದರೆ, ಯೋಚಿಸುವ ಅಗತ್ಯವಿಲ್ಲ ಇಲ್ಲ ಆಸಕ್ತ ರೈತರು ಅಧಿಸೂಚಿತ ಬೆಳೆಗೆ ಹತ್ತಿರದ ಬ್ಯಾಂಕಿನಲ್ಲಿ ವಿಮಾ ಕಂತು ತುಂಬಿ ಬೆಳೆಗೆ ವಿಮೆಯನ್ನು ಮಾಡಿಸಲು ಇಲಾಖೆ ಕೋರಲಾಗಿದೆ.

Kharif Season Crop Insurance: ರೈತರು ಬೆಳೆ ವಿಮೆಯನ್ನು ಎಲ್ಲಿ ಮಾಡಿಸಬೇಕು?

ರೈತರು ಬೆಳೆ ವಿಮೆಯನ್ನು ತಮ್ಮ ಹತ್ತಿರದಲಿನ ಬ್ಯಾಂಕ್ ಮತ್ತು ಸಾಮಾನ್ಯ ಸೇವಾ ಕೇಂದ್ರ ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಿಸಬಹುದಾಗಿದೆ, ಬೆಳೆ ವಿಮೆಯ ಯೋಜನೆಯ ಮಾಹಿತಿಗೆ ಸಮೀಪದಲ್ಲಿ ರೈತರ ಸಂಪರ್ಕ ಕೇಂದ್ರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅಥವಾ ಬೆಳೆ ವಿಮೆಯ ಕಂಪನಿಯಲ್ಲಿ ತಾಲ್ಲೂಕು ಪ್ರತಿನಿಧಿಗಳನ್ನು ಭೇಟಿಯನ್ನು ಮಾಡಿ. ವಿಮಾ ಕಂಪನಿ ಸಿಂಬದ್ದಿ ಮೊಬೈಲ ನಂಬರ್ ಬೇಕಾದರೆ 1800180 1551 ಸಹಾವಾಣಿ ನಂಬರಿಗೆ ಕೆರೆಯನ್ನು ಮಾಡಬಹುದು.

2024-25ರ ಮುಂಗಾರು ಹಂಗಾಮು ಅಧಿಸೂಚಿತ ಬೆಳೆಗಳು: Kharif Season Crop Insurance

ಒಟ್ಟು 36 ಆಹಾರ ಎಣ್ಣೆ ಕಾಳುಗಳನ್ನು ವಾರ್ಷಿಕ ವಾಣಿಜ್ಯ ಹಾಗೂ ತೋಟಗಾರಿಕೆಯ ಬೆಳೆಗಳನ್ನು ಮುಂಗಾರು ಹಂಗಾಮು 2024ರ ಅಧಿಸೂಚನೆ ಬೆಳೆಗಳನ್ನಾಗಿ ನಿಗದಿಪಡಿಸಲಾಗಿದೆ ಈ ರೀತಿ ಮುಖ್ಯ ಬೆಳೆಗಳನ್ನು ಹಾಗೂ ಇತರೆ ಬೆಳೆಗಳನ್ನು ತಾಲ್ಲೂಕಿನವಾರು ಪರಿಗಣಿಸಲಾಗುತ್ತದೆ, ಗ್ರಾಮ ಪಂಚಾಯತ್ ನಗರ ಸ್ಥಳೀಯ ಸಂಸ್ಥೆಗಳನ್ನು ಮುಖ್ಯ ಬೆಳೆಗಳಿಗೆ ವಿಮಾ ಗುಂಪುಗಳನ್ನಾಗಿ ಪರಿಗಣಿಸಲಾಗಿದೆ, ಅದೇ ರೀತಿ ಇತರೆ ಬೆಳೆಗಳಿಗೆ ಕೊಡ ವಿಮಾ ಘಟಕವಾಗಿ ಹೋಬಳಿಯನ್ನು ಪರಿಗಣಿಸಲಾಗಿದೆ ಅಧಿಸೂಚಿತ ಬೆಳೆಗಳ ಪಟ್ಟಿಯನ್ನು ಕೆಳಗಿನಂತಿರುತ್ತದೆ:

  • ಅರಿಶಿನ
  • ಅಲಸಂದೆ
  • ಆಲೂಗಡ್ಡೆ
  • ಈರುಳ್ಳಿ
  • ಉದ್ದು
  • ಎಲೆಕೋಸು
  • ಕೆಂಪು ಮೆಣಸಿನಕಾಯಿ
  • ಜೋಳ
  • ಟೊಮ್ಯಾಟೊ
  • ತೊಗರಿ
  • ನವಣೆ
  • ನೆಲಗಡಲೆ
  • ಭತ್ತ
  • ಮುಸುಕಿನ ಜೋಳ
  • ರಾಗಿ
  • ಸಜ್ಜೆ
  • ಸಾವೆ
  • ಸೂರ್ಯಕಾಂತಿ
  • ಸೋಯಾ ಅವರೆ
  • ಹತ್ತಿ

ನಿಮ್ಮ ಜಿಲ್ಲೆ ಮತ್ತು ಬೆಳೆವಾರು ದಿನಾಂಕಗಳ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ: https://samrakshane.karnataka.gov.in/PublicView/FindCutOff.aspx

ಸರಕಾರದ ‘ಸಂರಕ್ಷಣೆ’ ಬೆಳೆ ವಿಮೆಯ ಪೇಜ್ ಅನ್ನು ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡ ನಂತರ ಬೆಳೆಗಳ ಮಾಹಿತಿಯನ್ನು ಬೆಳೆವಿಮೆ ಪಾವತಿಗೆ ನಿಗದಿಯಾದ ಕೊನೆಯ ದಿನಾಂಕಗಳ ವಿವರದ ಪಟ್ಟಿಯನ್ನು ನಂತರ ಆ ಪ್ರಕಾರ ತಮಗೆ ಅಗತ್ಯವಾದ ಬೆಳೆಗಳಿಗೆ ನಿಗದಿತ ದಿನಾಂಕದೊಳಗೆ ಪಾವತಿಯನ್ನು ಮಾಡಬಹುದು.

Back To Home: ಇಲ್ಲಿ ಕ್ಲಿಕ್ ಮಾಡಿ

Leave a Comment

error: Don't Copy Bro !!