KSRTC News: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಈ ಒಂದು ಲೇಖನದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವಾರು ಯೋಜನೆಗಳನ್ನ ಜಾರಿಗೆ ತಂದಿತ್ತು ಅದರಲ್ಲಿ ಒಂದು ಈ ಶಕ್ತಿ ಯೋಜನೆ ಆಗಿದೆ, ಈ ಯೋಜನೆ ಅಡಿಯಲ್ಲಿ ಮಹಿಳೆಯರು ಉಚಿತವಾಗಿ ಕೆಎಸ್ಆರ್ಟಿಸಿ ಬಸ್ ನಲ್ಲಿ ರಾಜ್ಯದೊಳಗಡೆ ಎಲ್ಲಿ ಬೇಕಾದಲ್ಲಿ ಚಲಿಸಬಹುದಾಗಿರುತ್ತದೆ. ಅದೇ ರೀತಿಯಾಗಿ ಮಹಿಳೆಯರು ಮೊದಲು ಹಣದ ಭಯಕ್ಕಾಗಿ ಯಾವುದೇ ಬಸ್ಗಳಲ್ಲಿ ಓಡಾಡದೆ ಮನೆಯಲ್ಲಿ ಹಾಗೆ ಸುಮ್ಮನೆ ಕುಳಿತುಬಿಡುತ್ತಿದ್ದರು ಇವಾಗ ಬಸ್ಸುಗಳಲ್ಲಿ ಮಹಿಳೆಯರ ಕಾರ್ಬಾರ ಎಂದು ಹೇಳಬಹುದು.
ಮಹಿಳೆಯರ ಪ್ರಯಾಣ ದಿನಲೂ ಮಹಿಳೆಯರು ಹೆಚ್ಚಾಗುತ್ತಿರುವುದರಿಂದ ಆದ್ದರಿಂದ ಸರ್ಕಾರಿ ಬಸ್ಸುಗಳು ಫುಲ್ ರಶ್ ಆಗುತ್ತಿವೆ, ಆದ್ದರಿಂದ ಸರ್ಕಾರಿ ಬಸ್ಸುಗಳಲ್ಲಿ ಅಂಗವಿಕಲ ಹಿರಿಯ ವ್ಯಕ್ತಿಗಳು ಮತ್ತು ಪುರುಷರು ಓಡಾಡಲು ಬಹಳ ತೊಂದರೆ ಉಂಟಾಗುತ್ತಿದೆ, ಅದೇ ರೀತಿಯಾಗಿ ನಾವು ಹಣ ಕೊಟ್ಟು ಬಸ್ಸಿನಲ್ಲಿ ನಿಂತುಕೊಂಡು ಹೋಗಬೇಕಾಗುತ್ತದೆ ಎಂದು ಪುರುಷರು ಸರ್ಕಾರಿ ಬಸ್ಸುಗಳಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರು 50 ಶೇಕಡಾ ಪುರುಷರಿಗೆ ಮತ್ತು 50% ಮಹಿಳೆಯರಿಗೆ ಎಂದು ರಿಯಾಯಿತಿಯನ್ನು ಘೋಷಣೆ ಮಾಡಿದ್ದಾರೆ.
ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಕಹಿ ಸುದ್ದಿ:
ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿ ದೇವಸ್ಥಾನ ಅಥವಾ ಪ್ರವಾಸ ಹಾಗೂ ದೂರದ ಬೀಗರ ಮನೆಗೆ ಓಡಾಡುವ ಮಹಿಳೆಯರಿಗೆ ಕಹಿ ಸುದ್ದಿನೇ ಎನ್ನಬಹುದು, ಮಹಿಳೆಯರು ಬಸ್ಸಿನಲ್ಲಿ ತಾವು ಓಡಾಡದೆ ತಮ್ಮ ಜೊತೆಗೆ ಬಾರದ ಲಗೇಜ್ ಗಳನ್ನು ತೆಗೆದುಕೊಂಡು ಹೊರಟಿದ್ದಾರೆ, ಲಗೇಜ್ ಗಳಿಗೆ ಟಿಕೆಟ್ ಸಹ ನೀಡುತ್ತಾರೆ, ಆದ್ರೆ ಇವಾಗ ಲಗೇಜ್ ಮೇಲೆ ಟಿಕೆಟ್ ಶುಲ್ಕ ಏರಿಕೆ ಆಗಲಿದೆ ಎಂಬ ಮಾಹಿತಿ ಬಂದಿದೆ.
ಟಿಕೆಟ್ ಬೆಲೆ ಏರಿಕೆ:
ನೀವು ಸರ್ಕಾರಿ ಬಸವಗಳಲ್ಲಿ ಲಗೇಜ್ ಗಳನ್ನು ತೆಗೆದುಕೊಂಡು ಹೋದಾಗ ಸಾಮಾನ್ಯವಾಗಿ ಲಗೇಜ್ ಗಳಿಗೆ ಟಿಕೆಟ್ ನೀಡಲಾಗುತ್ತದೆ. ನಿಮ್ಮ ಲೆಗೆ ಏನಾದರೂ 10 ಕೆಜಿ ತೂಕವಿದ್ದರೆ ಅದಕ್ಕೆ ರೂ.5 ಟಿಕೆಟ್ ಅನ್ನು ನೀಡಲಾಗುತ್ತದೆ, ಅದೇ ರೀತಿಯಾಗಿ ಇನ್ನು ಮುಂದೆ ನಿಮ್ಮ ಲಗೇಜ್ ಹತ್ತು ಕೆಜಿ ತೂಕ ಬಂದಿದ್ರೆ ಆ ಲ್ಗೆಜ್ ಗೆ ನೀವು 15 ರೂಪಾಯಿ ಕನಿಷ್ಠ ಟಿಕೆಟ್ ಅನ್ನು ಕಟ್ಟಬೇಕಾಗುತ್ತದೆ ಎಂದು ರಾಜ್ಯ ಸರ್ಕಾರವು ಹೇಳಿದೆ.
ಲಗೇಜ್ ಗಳಿಗೆ ಹಣವನ್ನು ಪಾವತಿಸದೇ ಇದ್ದರೆ ಅಂತವರಿಗೆ ದುಪ್ಪಟ್ಟು ದಂಡವನ್ನು ವಿಧಿಸಲಾಗುತ್ತದೆ, ಅದೇ ರೀತಿಯಾಗಿ ನೀವು ಪ್ರಯಾಣಿಸುವಾಗ ನಿಮ್ಮ ಲಗೇಜ್ ಅನ್ನು ಪಕ್ಕದ ಸೀಟ್ ಮೇಲೆ ಅಥವಾ ಡ್ರೈವರ್ ಹತ್ತಿರ ಅಥವಾ ಇಂಜಿನ್ ಮೇಲೆ ನಿಮ್ಮ ಲಗೇಜ್ ಅನ್ನು ಇಡುವಂತಿಲ್ಲ, ಬಸ್ ಡಿಕ್ಕಿಯಲ್ಲಿ ಅಥವಾ ಮೇಲ್ಭಾಗದ ಲಗೇಜ್ ಸ್ಥಳದಲ್ಲಿ ಇಡುವಂತೆ ರಾಜ್ಯ ಸರ್ಕಾರವು ಈ ಒಂದು ಮಾಹಿತಿ ತಿಳಿಸಲಾಗಿದೆ.