PhonePe Loan: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ನಿಮ್ಮ ಫೋನಿನಲ್ಲಿ ಅವಕಾಶವಿದೆ ಎಂದು ಹೇಳಿದರೆ ನೀವು ನಂಬುತ್ತೀರಾ? ನಂಬಲೇಬೇಕು! ಯಾಕೆಂದರೆ ಫೋನ್ ಪೇ ಮೂಲಕ ನೀವು ಬ್ಯಾಂಕಿಗೆ ಅಲೆದಾಟವಿಲ್ಲದೆ ವೈಯಕ್ತಿಕ ಸಾಲ(Personal Loan) ವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಇದರ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿದೆ ನೋಡಿ.
ನೀವೇನಾದರೂ ಫೋನ್ ಪೇ ಮೂಲಕ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ಒಂದು ಒಳ್ಳೆಯ ಪ್ರಯೋಜನವಿದೆ. ಅದೇನಂದರೆ, ನೀವು ಬ್ಯಾಂಕುಗಳಿಗೆ ಪದೇಪದೇ ಅಲೆದಾಡುವ ಅವಶ್ಯಕತೆ ಇರುವುದಿಲ್ಲ. ಹಾಗೂ ನಿಮ್ಮ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ಮೂಲಕ ನೀವು ಸಾಲವನ್ನು ಪಡೆದುಕೊಳ್ಳಬಹುದು.
ಅಗತ್ಯವಿರುವ ದಾಖಲೆಗಳು:
- ಬ್ಯಾಂಕ್ ಸ್ಟೇಟ್ ಮೆಂಟ್
- ಪಾನ್ ಕಾರ್ಡ್
- ಆಧಾರ್ ಕಾರ್ಡ್
ಮೇಲೆ ಕೊಟ್ಟಿರುವ ದಾಖಲೆಗಳನ್ನು ಬಳಸಿಕೊಂಡು ನೀವು ಫೋನ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಏನಾದರೂ ಉತ್ತಮವಾಗಿದ್ದರೆ, ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರಕುವ ಸೌಲಭ್ಯವು ಕೂಡ ಇದೆ.
ಸಾಲಕ್ಕೆ ಅರ್ಹತೆಗಳೇನು?
- ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಅಪ್ಲಿಕೇಶನ್ ಹೊಂದಿರಬೇಕು.
- ಕನಿಷ್ಠ 21 ವರ್ಷ ಮೇಲ್ಪಟ್ಟಿರಬೇಕು ಹಾಗೂ 58 ವರ್ಷಗಳ ಮೀರಿರಬಾರದು.
- ಆದಾಯದ ಮೂಲ ಉತ್ತಮವಾಗಿರಬೇಕು ಅಥವಾ ನೀವು ಪ್ರತಿ ತಿಂಗಳಿಗೆ ಆದಾಯವನ್ನು ಗಳಿಸುತ್ತಿರಬೇಕು.
- ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕು ಸುಮಾರು 700 ರಿಂದ 750ಕ್ಕಿಂತ ಹೆಚ್ಚು.
ಸಾಲ ಪಡೆಯುವುದು ಹೇಗೆ?
ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳಲು ಬಯಸಿದರೆ ನಿಮ್ಮ ಮೊಬೈಲ್ ನಲ್ಲಿ ಮೊದಲು ಪ್ಲೇ ಸ್ಟೋರ್ ನಿಂದ ಫೋನ್ ಪೇ ಅಪ್ಲಿಕೇಶನನ್ನು ಪಡೆದುಕೊಳ್ಳಿ. ಲಾಗಿನ್ ಆಗುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ಅದರಲ್ಲಿ ಸೇರಿಸಿ ನಂತರ ಯುಪಿಐ ಐಡಿಯನ್ನು ನೋಂದಾಯಿಸಿ. ನಂತರ ನೀವು ಅಲ್ಲಿ ಸಾಲದ ವಿಭಾಗವನ್ನು ಕಾಣಬಹುದಾಗಿರುತ್ತದೆ ಸಾಲದ ವಿಭಾಗದಲ್ಲಿ ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ.
ನಿಮ್ಮ ಸಿಬಿಲ್ ಸ್ಕೋರ್ ಅನ್ನು ಗಮನಿಸಿ ನೀವು ಸಾಲಕ್ಕೆ ಅರ್ಹರಾಗಿದ್ದೀರಾ ಅಥವಾ ಇಲ್ಲವಾ ಎಂದು ಫೋನ್ ಪೇ ನಿರ್ಣಯ ಮಾಡುತ್ತದೆ. ನಂತರ ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದಲ್ಲಿ ಸುಲಭವಾಗಿ ಫೋನ್ ಪೇ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ.