PM Kisan scheme: ನಮಸ್ಕಾರ ಸಮಸ್ತ ನಾಡಿನ ಜನತೆಗ ಪ್ರಧಾನಿ ನರೇಂದ್ರ ಮೋದಿಜೀ ಜನರಿಗೆ ಅನುಕೂಲವಾಗುವಂತೆ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಲಕ್ಷಾಂತರ ರೈತರು ಹಿರಿಯ ನಾಗರಿಕರು ಮತ್ತು ಕೆಲವು ವರ್ಗದ ಜನರಿಗೆ ಪ್ರಯೋಜನವನ್ನು ನೀಡುತ್ತಿದ್ದಾರೆ.
PM ಕಿಸಾನ್ ಸಮ್ಯಾನ್ ನಿಧಿ ಯೋಜನೆಯ 17 ನೇ ಕಂತಿನ18 ಜೂನ್ 2024 ಮಂಗಳವಾರದಂದು ದೇಶಾದ್ಯಂತ ಎಲ್ಲ ರೈತರಿಗೆ ಬಿಡುಗಡೆಯನ್ನು ಮಾಡಲಾಗುತ್ತಿದೆಷನೀವು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ಈ ಕೆಳಗಿನ ಮಾಹಿತಿಯ ಮೂಲಕ ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಚೆಕ್ ಮಾಡಿಕೊಳ್ಳಿ.
ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು 9 ಜೂನ್ 2024 ರಂದು ಪ್ರಮಾಣ ವಚನವನ್ನು ಸ್ವೀಕರಿಸಿದರು ಮತ್ತು ಜೂನ್ 10 ರಿಂದ ಪ್ರಧಾನಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಪ್ರಾರಂಭಿಸಿದರು ಅದರಂತೆ 18 ಜೂನ್ 2024 ರಂದು ರೈತರ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆಯ 17 ನೇ ಕಂತಿನ ಹಣವನ್ನು ಕೂಡ ಜಮಾ ಮಾಡುವುದಾಗಿ ಅವರು ಭರವಸೆಯನ್ನು ನೀಡಿದ್ದಾರೆ.
PM Kisan scheme: ಪ್ರಧಾನ ಮಂತ್ರಿ ಕಿಸಾನ್ ಯೋಜನೆ:
ಹಲವಾರು ವರ್ಷಗಳ ಹಿಂದೆ ಪ್ರಾರಂಭಿಸಿದಂತ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಿಂದ ಪ್ರತಿ ವರ್ಷವೂ ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ. ಅಂದರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಸರಕಾರವು ರೈತರ ಖಾತೆಗೆ ಎರಡು ಅಥವಾ ಎರಡು ಸಾವಿರ ರೂ. ಹೀಗಾಗಿ ಸರಕಾರ ನೇರವಾಗಿ CVT ಮೂಲಕ ರೈತರ ಖಾತೆಗಳಿಗೆ ಹಣ ಜಮಾ ಮಾಡುತ್ತಿದ್ದು 16ನೇ ಕಂತು 2024ರ ಫೆ.28ರಂದು ಬಿಡುಗಡೆಯಾಗಿದ್ದು 17ನೇ ಕಂತು 2024ರ ಜೂನ್ 18ರಂದು ಬಿಡುಗಡೆಯನ್ನು ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ.
ಮೊದಲಿಗೆ PM ಕಿಸಾನ್ ಯೋಜನೆಯ ಅಧಿಕೃತವಾದ ವೆಬ್ಸೈಟ್ಗೆ ಭೇಟಿಯನ್ನು ನೀಡಿ ಮತ್ತು ರೈತರ ಕಾಲಮ್ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡ ನಂತರದಲ್ಲಿ ಅಲ್ಲಿ ಪ್ರಕಟಿಸಲಾಗುವಂತ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ರಾಜ್ಯದ ಜಿಲ್ಲೆ ತಾಲ್ಲೂಕು ಮತ್ತು ಗ್ರಾಮದ ಹೆಸರನ್ನು ನಮೂದಿಸಿ ಮತ್ತು ವರದಿಯನ್ನು ಪಡೆಯಿರಿ ರಾಜ್ಯದ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿದೆಯೇ ಎಂಬುದನ್ನು ಎಚ್ಚರಿಕೆಯಿಂದ ನೀವು ಪರಿಶೀಲಿಸಿಕೋಳ್ಳಿ.