PM Shramayogi Mandhan Yojana: ಕಾರ್ಮಿಕರ ಹೊಸ ಪೆನ್ಶನ್ ಸ್ಕೀಮ್.!! ಪ್ರತಿ ತಿಂಗಳಿಗೆ ಸಿಗತ್ತೆ ₹3000 ಪಿಂಚಣಿ.

PM Shramayogi Mandhan Yojana: ನಮಸ್ಕಾರ ಎಲ್ಲಾ ಕನ್ನಡದ ಜನತೆಗೆ ನಮ್ಮ ದೇಶದಲ್ಲಿನ ಮಧ್ಯಮ ವರ್ಗದ ಜನರ ಬದುಕಿಗೆ ಯಾವುದೇ ಗ್ಯಾರೆಂಟಿ ಇಲ್ಲ ಅವರು ಅಂದು ದುಡಿದು ಅಂದಿನ ಬದುಕನ್ನು ಸಾಗಿಸಬೇಕು, ಅದರಲ್ಲೂ ನಿವೃತ್ತಿ ಹೊಂದಿದ ನಂತರದ ಸಮಯದಲ್ಲಿ ಬದುಕು ಸಾಗಿಸುವುದೇ ಕಷ್ಟಕರವಾಗಿಯೇ ಬಿಡುತ್ತದೆ, ಸರ್ಕಾರಿ ಕೆಲಸವನ್ನು ಮಾಡುವವರಿಗೇನೋ ನಿವೃತ್ತಿ ಬಳಿಕ ಸರ್ಕಾರದಿಂದಲೇ ಪಿಂಚಣಿ ಸಿಗುತ್ತದೆ, ಆದರೆ ಮಧ್ಯಮವರ್ಗಕ್ಕೆ ಸೇರಿದಂತ ಕಾರ್ಮಿಕ ವರ್ಗಕ್ಕೆ ಜನರ ಕಥೆ ಅವರಿಗೆ ಸರ್ಕಾರದಿಂದ ಯಾವುದೇ ಪಿಂಚಣಿ ಸೌಲಭ್ಯ ಸಿಗುವುದಿಲ್ಲ.

ಆದರೆ ಅಸಂಘಟಿತ ಕಾರ್ಮಿಕ ವರ್ಗದಲ್ಲಿ ಕೆಲಸವನ್ನು ಮಾಡುತ್ತಿರುವವರಿಗೆ ಒಂದು ಸಂತೋಷದ ಸುದ್ದಿ ಇದೆ, ಅವರಿಗಾಗಿಯೇ ಕೇಂದ್ರ ಸರ್ಕಾರದಿಂದ ಒಂದು ಹೊಸ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಆ ಯೋಜನೆಯಲ್ಲಿ ಅತೀ ಕಡಿಮೆ ಹಣವನ್ನು ಉಳಿತಾಯ ಮಾಡುತ್ತಾ ಬಂದರೆ ಸಾಕು 60 ವರ್ಷಗಳ ನಂತರ ಅವರು ಪ್ರತಿ ತಿಂಗಳು ಪೆನ್ಶನ್ ರೂಪದಲ್ಲಿ ಹಣವನ್ನು ಪಡೆಯಬಹುದು ಈ ಯೋಜನೆಯ ಹೆಸರು ಪಿಎಂ ಶ್ರಮಯೋಗಿ ಮನ್ ಧನ್ ಯೋಜನೆ ಆಗಿದೆ.

PM Shramayogi Mandhan Yojana: ಪಿಎಂ ಶ್ರಮಯೋಗಿ ಮನ್ ಧನ್ ಯೋಜನೆಯ ವಿವರ:

ಪಿಎಂ ಶ್ರಮಯೋಗಿ ಮನ್ ಧನ್ ಈ ಯೋಜನೆಯಲ್ಲಿ ಅಸಂಘಟಿತ ಕಾರ್ಮಿಕರು ಹೂಡಿಕೆಯನ್ನು ಮಾಡುತ್ತಾ ಬರಬಹುದು, ಈ ಮೂಲಕ 60 ವರ್ಷಗಳಾದ ಮೇಲೆ ನೆಮ್ಮದಿಯಿಂದ ಜೀವನವನೂ ಸಾಗಿಸಬಹುದು, ಈ ಯೋಜನ ಹೇಗೆ ಕೆಲಸವನ್ನು ಮಾಡುತ್ತದೆ ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆಯನ್ನು ಮಾಡಬೇಕು ಯಾರೆಲ್ಲಾ ಈ ಯೋಜನೆಯ ಸೌಲಭ್ಯ ಪಡೆಯಬಹುದು ಎನ್ನುವುದು ಎಲ್ಲಾ ಮಾಹಿತಿಗಳು ತಿಳಿಸುತ್ತೇವೆ ನೋಡಿ.

PM Shramayogi Mandhan Yojana: ಈ ಯೋಜನೆಯ ಪ್ರಯೋಜನೆಗಳು:

18 ವರ್ಷಗಳು ತುಂಬಿದ ವ್ಯಕ್ತಿ ಅಸಂಘಟಿತ ಕಾರ್ಮಿಕನಾಗಿ ಕೆಲಸವನ್ನು ಮಾಡುತ್ತಿದ್ದಾನೆ, ಎಂದರೆ ಆ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡುವುದಕ್ಕೆ ಶುರು ಮಾಡಬಹುದು 18ನೇ ವಯಸ್ಸಿನಲ್ಲಿ ಹೂಡಿಕೆಯನ್ನು ಶುರು ಮಾಡುತ್ತಾನೆ ಎಂದರೆ 60 ವರ್ಷಗಳಾಗುವ ವರೆಗು ಪ್ರತಿ ತಿಂಗಳು 55 ರೂಪಾಯಿಗಳನ್ನು ಪಾವತಿ ಮಾಡುತ್ತಾ ಬರಬೇಕು.

ಇತ್ತ ಸರ್ಕಾರ ಅವರ ಹೆಸರಿನಲ್ಲಿ ಪ್ರತಿ ತಿಂಗಳು ಕೂಡ ಅವರು ಹೂಡಿಕೆಯನ್ನು ಮಾಡಿದಷ್ಟೇ ಮೊತ್ತವನ್ನು ಇಡುತ್ತದೆ, ಆ ವ್ಯಕ್ತಿಯ ಹೆಸರಿನಲ್ಲಿ ತಿಂಗಳಿಗೆ 110 ರೂಪಾಯಿ ಹೆಸರಿನಲ್ಲಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. 19ನೇ ವಯಸ್ಸಿನಲ್ಲಿ ಹೂಡಿಕೆಯನ್ನು ಶುರು ಮಾಡಿದರೆ, ಪ್ರತಿ ತಿಂಗಳು 58 ರೂಪಾಯಿ ಠೇವಣಿ ಇಡುತ್ತಾ ಬರಬೇಕ 20ನೇ ವಯಸ್ಸಿನಲ್ಲಾದರೆ 61 ರೂಪಾಯಿಗಳು ಹೀಗೆ ಹೆಚ್ಚು ವಯಸ್ಸಿನವರು ಹೆಚ್ಚುವರಿ ಠೇವಣಿಯನ್ನು ಇಡಬೇಕಾಗುತ್ತದೆ.

ಹೀಗೆ 40 ವರ್ಷದವರೆಗು ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಬಹುದು 30 ವರ್ಷದ ವ್ಯಕ್ತಿ ಹೂಡಿಕೆ ಶುರು ಮಾಡಿದರೆ 30 ವರ್ಷಗಳ ಅವಧಿಯಲ್ಲಿ 37,800 ರೂಪಾಯಿಗಳ ಹೂಡಿಕೆಯನ್ನು ಮಾಡಿರುತ್ತಾನೆ, ಇನ್ನು ಸರ್ಕಾರವಕ ಕೂಡ ಆತನ ಅಕೌಂಟ್ ಗೆ ಅಷ್ಟೇ ಹಣವನ್ನು ನೀಡಲಿದೆ. ಈ ರೀತಿಯಾಗಿ ಪ್ರತಿ ತಿಂಗಳು 3000 ರೂಪಾಯಿಗಳನ್ನು ಪೆನ್ಶನ್ ರೂಪದಲ್ಲಿ ಹಣವನ್ನು ನಿಮಗೆ ನೀಡಲಾಗುತ್ತದೆ.

PM Shramayogi Mandhan Yojana: ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತಹ ಅರ್ಹತೆಗಳು:

  • 18 ರಿಂದ 40 ವರ್ಷಗಳ ಒಳಗಿರುವವರು ಅರ್ಜಿಯನ್ನು ಸಲ್ಲಿಸಬಹುದು.
  • ಇವರ ಆದಾಯ ತಿಂಗಳಿಗೆ ₹15,000 ಕ್ಕಿಂತ ಕಡಿಮೆ ಇರಬೇಕು.
  • ಇವರು ಟ್ಯಾಕ್ಸ್ ಕಟ್ಟುವ ಹಾಗಿರಬಾರದು.
  • ಇವರಿಗೆ ESI – PF – NPS ಯೋಜನೆಯ ಸೌಲಭ್ಯ ಇವರಿಗೆ ಇರಬಾರದು ಸಂಘಟಿತ ವಲಯದಲ್ಲಿ ಕೆಲಸವನ್ನು ಮಾಡುವಂತಹ ಕಾರ್ಮಿಕರಾಗಿರಬಾರದು.
  • 60 ವರ್ಷಗಳ ತುಂಬುವವರೆಗೂ ಪ್ರತಿ ತಿಂಗಳು ಕೂಡ ಠೇವಣಿ ಮೊತ್ತವನ್ನು ಪಾವತಿಯನ್ನು ಮಾಡಬೇಕು.

Leave a Comment

error: Don't Copy Bro !!