ರೈಲು ಪ್ರಯಾಣಿಕರಿಗೆ ದೊಡ್ಡ ಸುದ್ದಿ.!ಹಿರಿಯ ನಾಗರಿಕರಿಗೆ ಮತ್ತೆ ಸಿಗಲಿದೆ ಈ ಸೌಲಭ್ಯಗಳು..!!

ನಮಸ್ಕಾರ ಎಲ್ಲಾ ಕನ್ನಡದ ಸಮಸ್ತ ಜನತೆಗೆ: ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ದರದಲ್ಲಿ ಸರ್ಕಾರವು ನೀಡುತ್ತಿರುವ ರಿಯಾಯಿತಿಯನ್ನು 4 ವರ್ಷಗಳ ನಂತರ ಮತ್ತೆ ನೀಡುವುದಾಗಿ ಚರ್ಚೆಗಳು ನಡೆಯುತ್ತಿದೆ ಎನ್ನಲಾಗಿದೆ. 4 ವರ್ಷಗಳ ಹಿಂದೆ ನೀಡಿದ ಮತ್ತು ಈಗ ಜಾರಿಗೆ ಬರುವಂತ ರಿಯಾಯಿತಿ ದರ ಯಾವುದು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ನಿಮ್ಮ ಕುಟುಂಬದಲ್ಲಿ ಹಿರಿಯ ನಾಗರಿಕರಿದ್ದರೆ ನೀವೇ ಈ ವರ್ಗಕ್ಕೆ ಸೇರಿದ್ದು ಪದೇ ಪದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಈ ಸುದ್ದಿ ನಿಮಗೆ ಕಂಡಿತ ಉಪಯುಕ್ತವಾಗಿದೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ರೈಲ್ವೆ ನಿಲ್ಲಿಸಿದ ಪ್ರಯಾಣ ದರದ ರಿಯಾಯಿತಿಯನ್ನು ಸರ್ಕಾರವು ಮತ್ತೆ ಮರು ಆರಂಭಿಸಿದೆ ಎನ್ನಲಾಗಿದೆ. ಹೀಗಾದರೆ ಕೋಟ್ಯಂತರ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಹಿರಿಯ ನಾಗರಿಕರಿಗೆ ರೈಲು ಪ್ರಯಾಣದ ದರದಲ್ಲಿ ಸರ್ಕಾರ ನೀಡುತ್ತಿರುವ ರಿಯಾಯಿತಿಯನ್ನು 4 ವರ್ಷಗಳ ನಂತರ ಮತ್ತೆ ನೀಡುವುದಾಗಿ ಚರ್ಚೆಗಳು ನಡೆಯುತ್ತಿದೆ ಎನ್ನಲಾಗಿದೆ.ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾದರೆ ಮೋದಿ 3.0 ಸರ್ಕಾರ ಹಿರಿಯ ನಾಗರಿಕರಿಗೆ ನೀಡುವಂತ ದೊಡ್ಡ ಕೊಡುಗೆ ಇದಾಗಲಿದೆ.

ನಾಲ್ಕು ವರ್ಷಗಳ ನಂತರ ಟಿಕೆಟ್ ದರದ ಮೇಲೆ ವಿನಾಯಿತಿ ಸಿಗುವ ಸಾಧ್ಯತೆಗಳು ಇದೆ ಎಂದು ವರದಿಯಾಗಿದೆ. ಸುದ್ದಿಯ ಪ್ರಕಾರ ಮೋದಿ 3.0 ಸರ್ಕಾರದ ಅಡಿಯಲ್ಲಿ ಹಿರಿಯ ನಾಗರಿಕರಿಗೆ ರೈಲು ಪ್ರಯಾಣದ ರಿಯಾಯಿತಿಯನ್ನು ನಾಲ್ಕು ವರ್ಷಗಳ ನಂತರದಲ್ಲಿ ಮರು ಸ್ಥಾಪಿಸಬಹುದು.ಎಸಿ ಕೋಚ್‌ಗಳ ಬದಲಿಗೆ ಸ್ಲೀಪರ್ ಕ್ಲಾಸ್‌ಗೆ ಮಾತ್ರ ಈ ವಿನಾಯಿತಿಯನ್ನು ನೀಡುವುದಾಗಿ ಚರ್ಚೆಗಳು ನಡೆಯುತ್ತಿವೆ ಎಂದು ಸುದ್ದಿಯಲ್ಲಿ ಹೇಳಲಾಗಿದೆ.ರೈಲ್ವೆ ಮೇಲೆ ಕನಿಷ್ಠ ಆರ್ಥಿಕವಾಗಿ ಹೊರೆ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ.

ವಿನಾಯಿತಿ ಕಾಲಂ ಅನ್ನು ಮೀಸಲಾತಿ ನಮೂನೆಯಲ್ಲಿ ಭರ್ತಿಯನ್ನು ಮಾಡಬೇಕು:

ವಿನಾಯಿತಿ ಪಡೆಯಲು ಬಯಸುವಂತ ಹಿರಿಯ ನಾಗರಿಕರಿಗೆ ಮಾತ್ರ ರೈಲ್ವೆ ಪ್ರಯಾಣ ದರದಲ್ಲಿ ವಿನಾಯಿತಿ ಲಭ್ಯವಿರುತ್ತದೆ ಎಂದು ಸುದ್ದಿಯಲ್ಲಿ ತಿಳಿಸಲಾಗಿದೆ ಅದೇನೆಂದರೆ ನಿಮ್ಮ ವಯಸ್ಸನ್ನು ಮೊದಲಿನಂತೆ ನಮೂದಿಸಿದರೆ ರೈಲ್ವೆಯ ಈ ಸೌಲಭ್ಯದ ಲಾಭಗಳು ಸಿಗುವುದಿಲ್ಲ.ಈಗ ಹಿರಿಯ ನಾಗರಿಕರು ಟಿಕೆಟ್ ಕಾಯ್ದಿರಿಸುವಾಗ ರಿಸರ್ವ್ ಫಾರ್ಮ್‌ನಲ್ಲಿ ರಿಯಾಯಿತಿ ಕಾಲಂ ಅನ್ನು ಭರ್ತಿಯನ್ನು ಮಾಡಬೇಕಾಗುತ್ತದೆ.ಪ್ರತಿ ಪ್ರಯಾಣಿಕರಿಗೆ ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಈ ರಿಯಾಯಿತಿಯನ್ನು ನೀಡಲಾಗುವುದು ಎನ್ನಲಾಗಿದೆ.ಪೂರ್ವ ಕೋವಿಡ್ ನಿಯಮಗಳ ಪ್ರಕಾರ ಹಿರಿಯ ನಾಗರಿಕರಿಗೆ ಸಾಮಾನ್ಯ,ಎಸಿ ಮತ್ತು ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸಲು ಶೇಕಡಾ 50% ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿತ್ತು.

ಕೋವಿಡ್‌ಗೆ ಮುನ್ನ ರೈಲ್ವೇ ದರದಲ್ಲಿ 40% ರಿಯಾಯಿತಿಗಳು ನೀಡಲಾಗುತ್ತಿತ್ತು. 60 ವರ್ಷ ಮತ್ತು ಮೇಲ್ಪಟ್ಟ ಪುರುಷರಿಗೆ ಮೂಲ ದರದಲ್ಲಿ 40% ರಿಯಾಯಿತಿ ನೀಡಲಾಗುತ್ತಿತ್ತು.ಇದಲ್ಲದೆ,58 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಪ್ರಯಾಣ ದರದಲ್ಲಿ 50% ರಿಯಾಯಿತಿಯನ್ನು ನೀಡಲಾಗುತ್ತಿತ್ತು ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಈ ವಿನಾಯಿತಿಯನ್ನು ನಿಲ್ಲಿಸಲಾಯಿತು.

ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ:

ಇತ್ತೀಚೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೊರೊನಾ ಸಾಂಕ್ರಾಮಿಕದ ನಂತರದಲ್ಲಿ ಹಿರಿಯ ನಾಗರಿಕರ ರೈಲು ಪ್ರಯಾಣದಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದ್ದರು ಕೆಳಮನೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಮಾಹಿತಿಯನ್ನು ನೀಡುವಾಗ ರೈಲ್ವೆ ಸಚಿವರು ಮಾರ್ಚ್ 20 2020 ಮತ್ತು ಮಾರ್ಚ್ 31 2021ರ ನಡುವೆ 1.87 ಕೋಟಿಯ ಹಿರಿಯ ನಾಗರಿಕರು ರೈಲಿನಲ್ಲಿ ಪ್ರಯಾಣಿಸಿದ್ದಾರೆ ಎಂದು ಮಾಹಿತಿ ಹೇಳಿದ್ದಾರೆ ಆದರೆ ಏಪ್ರಿಲ್ 1/2021 ಮತ್ತು ಫೆಬ್ರವರಿ 2022 ನಡುವೆ 4.74 ಕೋಟಿಯ ಹಿರಿಯ ನಾಗರಿಕರು ರೈಲಿನಲ್ಲಿ ಪ್ರಯಾಣಿಸಿದ್ದಾರೆ ಆ ಸಮಯದಲ್ಲಿ ಅವರು ಹಿರಿಯ ನಾಗರಿಕರಿಗೆ ನೀಡಲಾದಂತ ವಿನಾಯಿತಿಯನ್ನು ಪುನಃ ಸ್ಥಾಪಿಸಲು ಸ್ಪಷ್ಟವಾಗಿ ನಿರಾಕರಿಸಿದ್ದರು ಆದರೆ ಈಗ ಅದನ್ನು ಮತ್ತೆ ಜಾರಿಗೆಯನ್ನು ತರಲು ಸರ್ಕಾರವು ಚಿಂತನೆಯನ್ನು ನಡೆಸಿದೆ ಎನ್ನಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಧನ್ಯವಾದಗಳು

Leave a Comment

error: Don't Copy Bro !!