Santoor Scholarship: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, “ಸಂತೂರ್ ಸ್ಕಾಲರ್ಶಿಪ್” ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವ ರೀತಿ ನೀವು ಅನ್ವಯಿಸಬೇಕು? ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಅರ್ಹತೆಗಳೇನು? ಎಂಬುದನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿರಿ.
ಬೇಕಾಗುವ ದಾಖಲೆಗಳು:
- 10ನೇ ತರಗತಿ ಅಂಕಪಟ್ಟಿ
- 12ನೇ ತರಗತಿಯ ಅಂಕಪಟ್ಟಿ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಪದವಿ ಕಾಲೇಜಿನ ಗುರುತಿನ ಚೀಟಿ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ವಿವರಗಳು
ಅರ್ಹತೆಗಳು:
- 2023-24ನೇ ಶೈಕ್ಷಣಿಕ ವರ್ಷದಲ್ಲಿ 12ನೇ ತರಗತಿ ಉತ್ತೀರ್ಣನಾಗಿರಬೇಕು.
- 2024-25 ರಿಂದ ಪ್ರಾರಂಭವಾಗಿರುವ ಪೂರ್ಣ ಅವಧಿಯ ಪದವಿ ಕೋರ್ಸ್ ಗಳಿಗೆ ದಾಖಲಾತಿಯನ್ನು ಪಡೆದಿರಬೇಕು.
- ಈ ವಿದ್ಯಾರ್ಥಿ ವೇತನಕ್ಕೆ ತೆಲಂಗಾಣ, ಕರ್ನಾಟಕ, ಛತ್ತೀಸ್ಗಡದ ವಿದ್ಯಾರ್ಥಿಗಳ ಮಾತ್ರ ಅರ್ಜಿ ಸಲ್ಲಿಸಬಹುದು.
ಪ್ರಯೋಜನಗಳು:
ಈ ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿ ಸಲ್ಲಿಸಿ ಆಯ್ಕೆಯಾದ ಹೆಣ್ಣು ಮಕ್ಕಳಿಗೆ ವಾರ್ಷಿಕವಾಗಿ ₹24,000 ಯನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುವುದು. ಅರ್ಹತೆ ಮತ್ತು ಆಸಕ್ತಿ ಉಳ್ಳಂತಹ ವಿದ್ಯಾರ್ಥಿಯರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು 23-9-2024 ಆಗಿರುತ್ತದೆ. ಕೊನೆ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ದಲ್ಲಿ ಮಾತ್ರ ಮಾನ್ಯವಾಗಿರುತ್ತದೆ ಎಂದು ತಿಳಿಸಲಾಗಿರುತ್ತದೆ. ಅರ್ಜಿ ಸಲ್ಲಿಸಲು ಬೇಕಾಗುವ ಜಾಲತಾಣದ ಲಿಂಕನ್ನು ಕೆಳಗಡೆ ನೀಡಲಾಗಿದೆ ನೋಡಿ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್: ಅಪ್ಲೈ ಮಾಡಿ!
ಮೇಲೆ ಕೊಟ್ಟಿರುವ ಜಾಲತಾಣದ ಲಿಂಕನ್ನು ಬಳಸಿಕೊಂಡು ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.