Uttara Kannada District Court Recruitment: ನಮಸ್ಕಾರ ಎಲ್ಲಾ ಕನ್ನಡದ ಸಮಸ್ತ ಜನತೆಗೆ ಉತ್ತರ ಕನ್ನಡ ಕಾರವಾರ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವಂತಹ ಬೆರಳಚ್ಚುಗಾರ ನಕಲುಗಾರ ಹಾಗೂ ಆದೇಶ ಜಾರಿಕಾರ ಹುದ್ದೆಗಳ ಭರ್ತಿಗೆ ಅರ್ಹತೆಗಳನ್ನು ಹಾಗೂ ಆಸಕ್ತಿಯನ್ನು ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ ವೇತನ ಶೈಕ್ಷಣಿಕ ಅರ್ಹತೆ ಕರ್ತವ್ಯ ಸ್ಥಳ ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ಸಂಪೂರ್ಣವಾಗಿ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
ಇಲಾಖೆ ಹೆಸರು: ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯ
ಒಟ್ಟು ಹುದ್ದೆಗಳು: 26
ಹುದ್ದೆಯ ಹೆಸರು: ವಿವಿಧ ಹುದ್ದೆಗಳು
ಉದ್ಯೋಗ ಸ್ಥಳ: ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯ – ಕರ್ನಾಟಕ
ಅರ್ಜಿ ಸಲ್ಲಿಸುವ ಬಗೆ: ಆನ್ಲೈನ್
ಸಂಬಳದ ವಿವರ:
- ಬೆರಳಚ್ಚುಗಾರ – 21400-42000
- ಬೆರಳಚ್ಚು ನಕಲುಗಾರ – 21400-42000
- ಆದೇಶ ಜಾರಿಕಾರ – 19950-37900
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ರೀತಿಯಾಗಿ ಸಂಬಳವನ್ನು ನೀಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ:
ಬೆರಳಚ್ಚುಗಾರರು: ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಕಮರ್ಷಿಯಲ್ ಪ್ರ್ಯಾಕ್ಟೀಸನಲ್ಲಿ ಮೂರು ವರ್ಷಗಳ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣತೆಯನ್ನೂ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಬೆರಳಚ್ಚು ನಕಲುಗಾರರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆಯನ್ನು ಅಥವಾ ಕಮರ್ಷಿಯಲ್ ಪ್ರ್ಯಾಕ್ಟೀಸನಲ್ಲಿ ಮೂರು ವರ್ಷಗಳ ಕಾಲ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣತೆಯನ್ನು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಆದೇಶ ಜಾರಿಕಾರರು: SSLC ಪರೀಕ್ಷೆಯಲ್ಲಿ ಉತ್ತೀರ್ಣತೆಯನ್ನು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ: ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ಪೂರೈಸಿರಬೇಕು.
- ಸಾಮಾನ್ಯ ಅಭ್ಯರ್ಥಿಗಳಿಗೆ: ಗರಿಷ್ಠ 35 ವರ್ಷಗಳ
- ಪ್ರವರ್ಗ 2A 3A 3B ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷ
- ಪ.ಜಾತಿ ಪ ಪಂಗಡ ಪ್ರವರ್ಗ 1 ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷಗಳ
ಅರ್ಜಿ ಶುಲ್ಕದ ವಿವರ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ರೂ. 300/-
- ಪ್ರವರ್ಗ 2A 2B 3A 3B ಅಭ್ಯರ್ಥಿಗಳಿಗೆ: ರೂ. 150
- ಪ.ಜಾತಿ ಪ.ಪಂ ಪ್ರವರ್ಗ 1 ಅಂಗವಿಕಲ ಅಭ್ಯರ್ಥಿಗೆ: ರೂ. 100/-
ಪಾವತಿಸುವ ವಿಧಾನ: ಆನ್ಲೈನ್ ಮುಖಾಂತರ ಪಾವತಿಸಬೇಕು
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕಗಳ ವಿವರ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19/07/2024
ಪ್ರಮುಖ ಅರ್ಜಿ ಸಲ್ಲಿಸುವ ಲಿಂಕ್: https://uttarakannada.dcourts.gov.in/online-recruitment/