Anganawadi Recruitment: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿಯಲ್ಲಿ ಖಾಲಿ ಇರುವಂತಹ ಅಂಗನವಾಡಿ ಸಹಾಯಕಿ ಹಾಗೂ ಕಾರ್ಯಕರ್ತರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತಿ ಮತ್ತು ಅರ್ಹತೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದರ ಬಗ್ಗೆ ಸಂಪೂರ್ಣವಾದ ವಿವರವನ್ನು ನೀವು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
ಹುದ್ದೆಗಳ ವಿವರ ಈ ಕೆಳಗಿನಂತಿದೆ! (Anganawadi Recruitment)
ಹುದ್ದೆಗಳ ಸಂಖ್ಯೆ: 734 ಹುದ್ದೆಗಳು
ಅಂಗನವಾಡಿ ಸಹಾಯಕಿ ಹುದ್ದೆಗಳು: 566
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು: 168
ನೇಮಕಾತಿ ಸ್ಥಳ:
- ಅರಕಲಗೂಡು
- ಅರಸೀಕೆರೆ
- ಆಲೂರು
- ಸಕಲೇಶಪುರ
- ಬೇಲೂರು
- ಹೊಳೆ ನರಸೀಪುರ
- ಚನ್ನರಾಯಪಟ್ಟಣ
- ಹಾಸನ ಜಿಲ್ಲೆ
ನಿಮಗೆ ಈ ಮೇಲೆ ನೀಡಿರುವ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಅಲ್ಲಿರುವ ಸ್ಥಳೀಯರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು? (Anganawadi Recruitment)
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು 12ನೇ ತರಗತಿಯನ್ನು ಅಂದರೆ ದ್ವಿತೀಯ ಪಿಯುಸಿ ಯನ್ನು ಕನ್ನಡ ಭಾಷೆಯಲ್ಲಿ ಮುಗಿಸಿರಬೇಕು ಎಂದು ತಿಳಿಸಲಾಗಿದೆ. ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10ನೇ ತರಗತಿಯನ್ನು ಕನ್ನಡ ಭಾಷೆಯಲ್ಲಿ ಮುಗಿಸಿರಬೇಕು ಎಂದು ತಿಳಿಸಲಾಗಿರುತ್ತದೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಗೆ ಕನಿಷ್ಠ 19 ವರ್ಷ ತುಂಬಿರಬೇಕು ಹಾಗೂ 35 ವರ್ಷವನ್ನು ಮೀರಿರಬಾರದು ಎಂದು ವಯೋಮಿತಿಯನ್ನು ತಿಳಿಸಲಾಗಿರುತ್ತದೆ. ಹಾಗೂ ವಿಕಲಚೇತನರಿಗೆ ಅಂತಾನೆ ವಿಶೇಷವಾಗಿ 10 ವರ್ಷಗಳ ವಯೋಮಿತಿ ಸಡಲಿಕ್ಕೆ ಯನ್ನು ಕೂಡ ನೀಡಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!
- 10ನೇ ತರಗತಿ ಅಂಕಪಟ್ಟಿ
- ವಾಸ ಸ್ಥಳದ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಅಂಗವಿಕಲರ ಗುರುತಿನ ಪ್ರಮಾಣ ಪತ್ರ (ಅಂಗವಿಕಲರಿಗೆ ಮಾತ್ರ)
ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನೀವು ತುಂಬಬೇಕಾಗಿಲ್ಲ. ಹಾಗೂ ಅರ್ಜಿ ಸಲ್ಲಿಸಲು ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 04-09 2024 ರಂದು ಕೊನೆ ದಿನಾಂಕವನ್ನಾಗಿ ಮಾಡಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
ಮೇಲೆ ಕೊಟ್ಟಿರುವ ಜಾಲತಾಣದ ಲಿಂಕನ್ನು ಬಳಸಿಕೊಂಡು ನೀವು ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಇದನ್ನೂ ಓದಿ: ರೇಷನ್ ಕಾರ್ಡ್ ಹೊಂದಿರುವವರಿಗೆ ₹15,000 ಹಣ! ಈಗಲೇ ಅರ್ಜಿ ಸಲ್ಲಿಸಿ!