KSRTC: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಅದರಲ್ಲಿ ಒಂದಾಗಿರುವ “ಶಕ್ತಿ ಯೋಜನೆ” ಯನ್ನು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಲು ಜಾರಿಗೆ ತರಲಾಗಿದೆ. ಈ ಯೋಜನೆಯ ಪ್ರಭಾವದಿಂದಾಗಿ ಮಹಿಳೆಯರು ಬಸ್ಸಿನಲ್ಲಿ ಓಡಾಡಲು ಯಾವುದೇ ರೀತಿಯ ಖರ್ಚನ್ನು ಮಾಡಬೇಕಾಗಿಲ್ಲ.
ಹಾಗಾಗಿ ಬಸ್ಸುಗಳಲ್ಲಿ ಓಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಗ್ಯಾರಂಟಿ ಯೋಜನೆಯಾಗಿರುವ ಶಕ್ತಿ ಯೋಜನೆಯಿಂದಾಗಿ ಉಚಿತ ಬಸ್ ಪ್ರಯಾಣ ಮಾಡುವುದರಿಂದ ಬಸ್ಸುಗಳಲ್ಲಿ ಸಾಕಷ್ಟು ಗದ್ದಲ ಇರುವುದು ನೀವು ಕಂಡಿರುತ್ತೀರ. ಸೀಟುಗಳ ಕೊರತೆಯು ಕೂಡ ತುಂಬಾ ಉಂಟಾಗುತ್ತದೆ. ಆದ್ದರಿಂದ ಇತ್ತೀಚಿಗೆ ಸಾರಿಗೆ ಸಂಚಾರ ಇಲಾಖೆ ಪ್ರಯಾಣಿಕರಿಗೆ ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿರುತ್ತದೆ. ಈ ನಿಯಮಗಳನ್ನು ಮುಖ್ಯವಾಗಿ ಪ್ರಯಾಣಿಕರು ತಿಳಿದುಕೊಳ್ಳಬೇಕು ಆದ್ದರಿಂದ ಲೇಖನ ಕೊನೆಯವರೆಗೂ ಓದಿ.
ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಎಲ್ಲರಿಗೂ ಕೂಡ ಹೊಸ ನಿಯಮಗಳು!
ಸ್ನೇಹಿತರೆ, ಸಾಮಾನ್ಯವಾಗಿ ನೀವು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಶಬ್ದ ಮಾಲಿನ್ಯ ಅಂದರೆ ಜೋರಾಗಿ ಹಾಡುಗಳನ್ನು ಕೇಳುವುದು ಅಥವಾ ಸಂಗೀತವನ್ನು ಕೇಳುವುದು ಮತ್ತು ಯಾರೋ ಒಬ್ಬರ ಜೊತೆ ಜೋರಾಗಿ ಗಲಾಟೆ ಮಾಡುವುದು ಹಾಗೂ ಹೆಚ್ಚಿನ ಮಟ್ಟದಲ್ಲಿ ಗದ್ದಲವನ್ನು ಉಂಟುಮಾಡುವುದು ಹಾಗೂ ಇನ್ನಿತರ ಘಟನೆಗಳ ಬಗ್ಗೆ ಉಲ್ಲಂಘನೆ ಮಾಡುವವರಿಗೆ ರಸ್ತೆ ಸಂಚಾರಿ ಸಾರಿಗೆ ನಿಗಮ ಇಲಾಖೆಯು ಇದೀಗ ಹೊಸ ನಿಯಮಗಳನ್ನು ಜಾರಿಗೆ ತಂದಿರುತ್ತದೆ.
ಉದಾಹರಣೆಗೆ ಹೇಳುವುದಾದರೆ, ಸಾರ್ವಜನಿಕ ವಸ್ತುಗಳಲ್ಲಿ ಯಾರೂ ಕೂಡ ಗಲಾಟೆ ಮಾಡದೆ ಮತ್ತು ಜೋರಾಗಿ ಶಬ್ದವನ್ನು ಮಾಡದೆ ಕಂಡಕ್ಟರ್ ಅಥವಾ ಚಾಲಕರ ಜೊತೆ ಗಲಾಟೆ ಮಾಡುವುದು ಹಾಗೂ ವ್ಯವಸ್ಥಿತ ಕಾರ್ಯಗಳನ್ನು ಕೂಡ ಮಾಡುವವರಿಗೆ ರಸ್ತೆ ಸಾರಿಗೆ ಸಂಚಾರ ನಿಗಮ ಇಲಾಖೆಯು ಕಾನೂನು ಬದ್ಧ ಕ್ರಮಗಳನ್ನು ಕೈಗೊಳ್ಳಬಹುದಾಗಿರುತ್ತದೆ ಎಂದು ಎಚ್ಚರಿಕೆಯಿಂದ ಮಾಹಿತಿಯನ್ನು ತಿಳಿಸಲಾಗಿರುತ್ತದೆ.
ಹೌದು ಸ್ನೇಹಿತರೆ, ಇದೀಗ ಬಸ್ಸುಗಳಲ್ಲಿ ಜೋರಾಗಿ ಹಾಡುಗಳನ್ನು ಕೇಳುವುದಾಗಲಿ ಹಾಗೂ ಕೆಎಸ್ಆರ್ಟಿಸಿ ಬಸ್ ಹಾಗೂ ಇನ್ನಿತರ ಸಾರಿಗೆ ಬಸ್ಸುಗಳಲ್ಲಿ ಈ ರೀತಿಯಾದ ಕಾರ್ಯಗಳನ್ನು ಮಾಡುವವರಿಗೆ ಬಸ್ಸಿನ ಒಳಗಿನಿಂದ ಹೊರಗೆ ಹಾಕುವ ಹಾಗೂ ಬಸ್ಸುಗಳನ್ನು ಯಾವುದೇ ರೀತಿಯ ಸಂಭಾಷಣೆ ಇಲ್ಲದೆ ತಕ್ಷಣವೇ ನಿಲ್ಲಿಸಬಹುದಾಗಿರುತ್ತದೆ. ಎಂದು ಕಂಡಕ್ಟರ್ ಮತ್ತು ಚಾಲಕರಿಗೆ ತಿಳಿಸಲಾಗಿರುತ್ತದೆ.
ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ಕಂಡಕ್ಟರ್ ಹಾಗೂ ಚಾಲಕರ ಮಾತು ಕೇಳಿದೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದರ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಂತವರನ್ನು ಕೂಡಲೇ ಬಸ್ಸಿನಿಂದ ಕೆಳಗೆ ಇಳಿಸುವ ಎಲ್ಲಾ ಅಧಿಕಾರವೂ ಕಂಡಕ್ಟರ್ ಹಾಗೂ ಚಾಲಕರಿಗೆ ಇರುತ್ತದೆ. ಹಾಗೂ ಅವರ ಪ್ರಯಾಣದರವನ್ನು ಕೂಡ ಮರುಪಾವತಿ ಮಾಡುವ ಯಾವುದೇ ಸಂದರ್ಭ ಇರುವುದಿಲ್ಲ.
ಗಮನಿಸಿ: ನಿಮಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ನೀವು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಮೇಲೆ ಕೊಟ್ಟಿರುವ ನಿಯಮಗಳನ್ನು ಪಾಲಿಸಿ ಇಲ್ಲಂದರೆ ನೀವು ಗೃಹ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ನಿಮ್ಮನ್ನು ಕೆಳಗೆ ಇಳಿಸುವ ಕಾರ್ಯವು ಕೂಡ ನಡೆಯಬಹುದು ಆದ್ದರಿಂದ ಬಸ್ಸಿನಲ್ಲಿ ಜಾಗರೂಕತೆಯಿಂದ ಪ್ರಯಾಣಿಸಿ ಎಂದು ಹೇಳಲು ಬಯಸುತ್ತೇನೆ.