Loan Waiver: ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ರಾಜ್ಯಾದ್ಯಂತ ಇರುವ ಎಲ್ಲಾ ಬೆಳೆ ಸಾಲ ಇರುವಂತಹ ರೈತರಿಗೆ ಒಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು. ರೈತರ ಬೆಳೆ ಸಾಲ ಮನ್ನಕ್ಕಾಗಿ ರಾಜ್ಯ ಸರ್ಕಾರದಿಂದ 232 ಕೋಟಿ ಹಣವು ಬಿಡುಗಡೆ ಮಾಡಲಾಗಿರುತ್ತದೆ ಹಾಗಾಗಿ ಯಾವ ರೈತರ ಸಾಲ ಮನ್ನಾ ಆಗಲಿದೆ ಎಂದು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ರೈತರ ಬೆಳೆ ಸಾಲ ಮನ್ನಾ! (Loan Waiver)
ಸ್ನೇಹಿತರೆ, ರೈತರು ತಮ್ಮ ಜಮೀನುಗಳು ಹಾಗು ಅದರಲ್ಲಿರುವ ಬೆಳೆಗಳ ಮೇಲೆ ಕೃಷಿ ಸಾಲವನ್ನು ಯಾವುದೇ ರೀತಿಯ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಥವಾ ಸಹಕಾರಿ ಬ್ಯಾಂಕುಗಳಲ್ಲಿ ಮತ್ತು ಇನ್ನಿತರ ಖಾಸಗಿ ಬ್ಯಾಂಕುಗಳಲ್ಲಿ ಕೃಷಿ ಉದ್ದೇಶ ಇಟ್ಟುಕೊಂಡು ಬೆಳೆ ಬೆಳೆಯುವ ಸಾಲವನ್ನು ಪಡೆದುಕೊಂಡಿರುತ್ತಾರೆ.
ಹೌದು ಸ್ನೇಹಿತರೆ ಸಾಕಷ್ಟು ಜನ ರೈತರು ಬೆಳೆದ ಬೆಳೆಯಿಂದ ಸಾಲವನ್ನು ಮರುಪಾವತಿಸಿ ಅದನ್ನು ಸಾಲವನ್ನು ಕಟ್ಟುವುದು ತುಂಬಾ ಕಷ್ಟವಾಗಿದೆ. ಮತ್ತು ಅದನ್ನು ತೀರಿಸುವವರೆಗೂ ಹೊಸ ಸಾಲವು ಕೂಡ ಸಿಗುವುದಿಲ್ಲ. ಹಾಗಾಗಿ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ನಂಬಿ ಜೀವನ ನಡೆಸುವುದು ಹಾಗೂ ಸಾಲವನ್ನು ತೀರಿಸಲು ಕೂಡ ಸಾಧ್ಯ ಆಗದೆ ಇರುವ ಕಾರಣದಿಂದ ತುಂಬಾ ಜನರು ಇಂತಹ ರೈತರು ಕೂಡ ಇದ್ದಾರೆ.
ಹಾಗಾಗಿ ರಾಜ್ಯ ಸರ್ಕಾರವು ರಾಜ್ಯದ್ಯಂತ ಇರುವ ಎಲ್ಲ ರೈತರ ಬೆಳೆ ಸಾಲ ಮನ್ನಾ ಮಾಡುವ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಹೇಳಬಹುದು.
ಹೀಗಾಗಿ ರಾಜ್ಯ ಸರ್ಕಾರ 2017-18 ನೇ ಸಾಲಿನಲ್ಲಿ ರಾಜ್ಯದ ರೈತರ ಎಲ್ಲಾ ಸಾಲ ಮನ್ನ ಮಾಡುವಂತಹ ಯೋಜನೆಯಲ್ಲಿ ರೈತರ ಬೆಳೆ ಸಾಲವನ್ನು ಮನ್ನಾ ಮಾಡುವುದಾಗಿ ತಿಳಿಸಿತ್ತು ಅದಕ್ಕೆ ಅನ್ವಯವಾಗುವಂತೆ ರಾಜ್ಯದ ಒಟ್ಟು 17.37 ಲಕ್ಷ ರೈತರ ಬೆಳೆ ಸಾಲವನ್ನು ಮನ ಮಾಡುವುದಾಗಿ ತಿಳಿಸಿದ್ದರು. ರಾಜ್ಯದ್ಯಂತ ವಿವಿಧ ತಾಂತ್ರಿಕ ದೋಷಗಳ ಕಾರಣದಿಂದಾಗಿ 31 ಸಾವಿರ ತೆರಿಗೆ ಇದರ ಪ್ರಯೋಜನ ಸಹ ದೊರೆತಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.
ನಡೆದಿರುವ ವಿಧಾನ ಪರಿಷತ್ ಸಚಿವ ಸಂಪುಟ ಸಭೆಯಲ್ಲಿ ಸಹಕಾರ ಸಚಿವರಾಗಿರುವಂತಹ ಕೆ.ಎನ್ ರಾಜಣ್ಣ ಅವರು ಇದರ ಬಗ್ಗೆ ಪ್ರತಿಕ್ರಿಯಿಸಿದ್ದು ಬೆಳೆ ಸಾಲ ಮನ್ನಾ ಯೋಜನೆ, ಇದರ ಅಡಿಯಲ್ಲಿ ಇಲ್ಲಿಯವರೆಗೆ ಪ್ರಯೋಜನವನ್ನು ಪಡೆಯದೆ ಇರುವ 31,000 ರೈತರಿಗೆ ನೀಡಬೇಕಾಗಿರುವ 161.51 ಕೋಟಿ ರೂಪಾಯಿಯನ್ನು ಬಾಕಿ ಇರುವ ರೈತರ ಮತ್ತು 64 ಕೋಟಿ ರೂಪಾಯಿ ಹಣ ಸೇರಿ ಒಟ್ಟು 232 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.