Ration Card: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಬಹಳಷ್ಟು ಜನರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಹಾಗೂ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಕಾತರದಿಂದ ಕಾಯುತ್ತಿದ್ದಾರೆ. ಅಂತವರಿಗೆ ಒಂದು ಸಿಹಿ ಸುದ್ದಿ ಎಂದೇ ಹೇಳಬಹುದು. ಯಾಕೆಂದರೆ, ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಯಾವಾಗ ಅವಕಾಶ ಕಲ್ಪಿಸಿಕೊಡಲಾಗುವುದು? ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗಿರುತ್ತದೆ.
ಈ ಹಿಂದೆ ಕೆಲವು ದಿನಗಳ ಹಿಂದೆ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಆದರೆ ಸರ್ವರ್ ದೋಷದ ಕಾರಣದಿಂದಾಗಿ ಹಲವಾರು ಜನ ರೇಷನ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಬದಲಾವಣೆ ಹಾಗೂ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಸಿಕ್ಕಿಲ್ಲ ಎಂದು ಹೇಳಬಹುದು. ಹಾಗಾಗಿ ಮುಂದಿನ ದಿನಗಳಲ್ಲಿ ಯಾವ ದಿನದಂದು ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗುವುದು ಇಲ್ಲಿದೆ ನೋಡಿ ವಿವರ.
ಹೊಸ ರೇಷನ್ (Ration Card) ಕಾರ್ಡ್ ಹಾಗೂ ತಿದ್ದುಪಡಿಗೆ ಯಾವಾಗ ಅವಕಾಶ?
ಈಗಾಗಲೇ ಸುಮಾರು 2,90,000ಕ್ಕೂ ಹೆಚ್ಚು ರೇಷನ್ ಕಾರ್ಡುಗಳ ಅರ್ಜಿಗಳು ಪರಿಶೀಲನೆಯಲ್ಲಿದ್ದು, ಹಾಗೂ ಈ ಹೊಸ ರೇಷನ್ ಕಾರ್ಡುಗಳ ಪರಿಶೀಲನೆಯು ಪ್ರಾರಂಭವಾಗಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಇವುಗಳ ವಿತರಣೆಯು ಮಾಡಲಾಗುವುದು ಎಂಬ ಮಾಹಿತಿಗಳು ತಿಳಿದುಬಂದಿವೆ. ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ರೇಷನ್ ಕಾರ್ಡ್ ಗಳ ವಿತರಣೆ ಆಗುವ ಸಾಧ್ಯತೆ ಇದೆ ಎಂದು ಹೇಳಬಹುದು.
ಹಾಗಾಗಿ ಸೆಪ್ಟೆಂಬರ್ ಮೊದಲನೇ ವಾರದ ನಂತರ ಅಂದರೆ ಸೆಪ್ಟೆಂಬರ್ 15ನೇ ತಾರೀಕು ಅಥವಾ ಅದರ ಮೇಲ್ಪಟ್ಟು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಅವಕಾಶವನ್ನು ಕೊಡಲಾಗುವುದು ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ನೀವು ಇನ್ನಷ್ಟು ಕಾಯಬೇಕಾಗುತ್ತದೆ.
ರೇಷನ್ ಕಾರ್ಡ್ (Ration Card) ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡಿಗೆ ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಜನನ ಪ್ರಮಾಣ ಪತ್ರ (6 ವರ್ಷದ ಮಕ್ಕಳ ಇದ್ದಲ್ಲಿ ಮಾತ್ರ)
- ಪಾಸ್ಪೋರ್ಟ್ ಅಳಿತೆಯ ಭಾವಚಿತ್ರ
ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಿಕೊಟ್ಟ ತಕ್ಷಣ ನೀವು ನಿಮ್ಮ ಹತ್ತಿರ ಇರುವ ಗ್ರಾಮವನ್, ಕರ್ನಾಟಕವನ್ ಹಾಗೂ ಬೆಂಗಳೂರು ವನ್ ಆನ್ಲೈನ್ ಸರ್ವಿಸ್ ಕೇಂದ್ರಗಳಲ್ಲಿ ಭೇಟಿ ನೀಡಿ. ನೀವು ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬಹುದು.