Ration Card: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಕರ್ನಾಟಕದ ಎಲ್ಲಾ ಸಮಸ್ತ ಜನತೆಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ, ರೇಷನ್ ಕಾರ್ಡ್ ಎಷ್ಟು ಮುಖ್ಯ ದಾಖಲೆ ಎಂಬುದು ನಿಮಗೆಲ್ಲ ಗೊತ್ತಿದೆ. ಮನೆಯ ರೇಷನ್ ನಿಂದ ಹಿಡಿದು ಹಲವಾರು ಯೋಜನೆಗಳ ಲಾಭಗಳನ್ನು ನೀವು ಪಡೆದುಕೊಳ್ಳಬೇಕೆಂದರೆ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ.
ಆದರೆ ಈ ಒಂದು ಕೆಲಸವನ್ನು ನೀವು ಆಗಸ್ಟ್ 31 ನೇ ತಾರೀಖಿನ ಒಳಗಾಗಿ ಮಾಡಿಲ್ಲ ಅಂದರೆ ನಿಮಗೆ ರೇಷನ್ ಕಾರ್ಡ್ (Ration Card) ಮೂಲಕ ದೊರೆಯುವ ಯಾವುದೇ ರೀತಿಯ ಯೋಜನೆಯ ಸೌಲಭ್ಯಗಳು ಕೂಡ ದೊರಕದೆ ಇರಬಹುದು. ಈ ವಿಷಯದ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ. ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ರೇಷನ್ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗಳು “ಇ-ಕೆವೈಸಿ” ಯನ್ನು ಕಡ್ಡಾಯವಾಗಿ ಮಾಡಿಸಬೇಕಾಗಿದೆ. ನೀವೇನಾದರೂ ಇ-ಕೆವೈಸಿ ಮಾಡಿಲ್ಲ ಅಂತ ಅಂದರೆ ಇದರ ಪರಿಣಾಮವನ್ನು ಅನುಭವಿಸಬೇಕಾದ ಸಂದರ್ಭವೂ ಕೂಡ ಬಂದರೂ ಬರಬಹುದು ಎಂದು ತಿಳಿಸಲಾಗಿದೆ.
ಹಾಗಾಗಿ ಈ ಕೂಡಲೇ ನಿಮ್ಮ ಹತ್ತಿರದಲ್ಲಿ ಇರುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ. ಆಗಸ್ಟ್ 31ರ ಒಳಗಾಗಿ ನೀವು “ಇ-ಕೆವೈಸಿ”ಯನ್ನು ಕಡ್ಡಾಯವಾಗಿ ಕಂಪ್ಲೀಟ್ ಮಾಡಿಸಿಕೊಳ್ಳಿ, ಎಂದು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿರುವ ಕೆಎಚ್ ಮುನಿಯಪ್ಪನವರು ತಿಳಿಸಿರುತ್ತಾರೆ.
ಬೇಕಾಗುವ ದಾಖಲೆಗಳು! (Ration Card)
- ಕುಟುಂಬದ ಮುಖ್ಯಸ್ಥೆಯ ಫೋಟೋ
- ಬ್ಯಾಂಕ್ ಪಾಸ್ ಬುಕ್
- ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡ್
- ಕುಟುಂಬದ ಸದಸ್ಯರ ಎಲ್ಲರ ಆಧಾರ್ ಕಾರ್ಡ್
- ರೇಷನ್ ಕಾರ್ಡ್
ಈ ಮೇಲಿನ ದಾಖಲೆಗಳನ್ನು ತೆಗೆದುಕೊಂಡು ನೀವು ರೇಷನ್ ಕಾರ್ಡ್ ನ ಇ-ಕೆವೈಸಿಯನ್ನು ಮಾಡಿಸಲು ಬಳಸಬಹುದಾಗಿರುತ್ತದೆ. ಮೇಲೆ ಕೊಟ್ಟಿರುವ ದಾಖಲೆಗಳು ರೇಷನ್ ಕಾರ್ಡ್ ಇ-ಕೆವೈಸಿಯನ್ನು ಮಾಡಿಸಲು ಕಡ್ಡಾಯವಾಗಿವೆ.
ಹಾಗಾಗಿ ನೀವು ನಿಮ್ಮ ಹತ್ತಿರದಲ್ಲಿ ಇರುವ ನ್ಯಾಯಬೆಲೆ ಅಂಗಡಿಗೆ ಒಂದು ಸಲ ಭೇಟಿ ನೀಡಿ. ಅಲ್ಲಿ ನೀವು ರೇಷನ್ ಕಾರ್ಡಿನ ಇ-ಕೆವೈಸಿಯನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿರುತ್ತದೆ. ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರನ್ನು ಕೂಡ ತೆಗೆದುಕೊಂಡು ಹೋಗಬೇಕು. ನೆನಪಿರಲಿ, ಆಗಸ್ಟ್ 31ರ ಒಳಗಾಗಿ ನೀವು ಈ ಕೆಲಸವನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ತಿಳಿಸಲಾಗಿರುತ್ತದೆ.