Ration Card E-KYC: ನಮಸ್ಕಾರ ಎಲ್ಲರಿಗೂ ಈ ಒಂದು ಲೇಖನದ ಮೂಲಕ ಎಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನೀವು ಆಗಸ್ಟ್ 31ನೇ ತಾರೀಖಿನ ಒಳಗಾಗಿ ಈ ಕೆಲಸವನ್ನು ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರನ್ನು ತೆಗೆದುಹಾಕಲಾಗುವುದು. ಹಾಗೂ ರೇಷನ್ ಕಾರ್ಡನ್ನು ಕೂಡ ರದ್ದು ಮಾಡಲಾಗುತ್ತದೆ. ಎಂದು ಮಾಹಿತಿಗಳು ಕೇಳಿ ಬಂದಿರುತ್ತವೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ.
ರೇಷನ್ ಕಾರ್ಡ್ ಈ-ಕೆವೈಸಿ (Ration Card E-KYC) ಕಡ್ಡಾಯ:
ಆಗಸ್ಟ್ 31 ನೇ ತಾರೀಖಿನ ಒಳಗಾಗಿ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ-ಕೆವೈಸಿ ಅನ್ನು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರವು ಆದೇಶ ಹೊರಡಿಸಿರುತ್ತದೆ. ರೇಷನ್ ಕಾರ್ಡ್ ನಲ್ಲಿರುವ ಸದಸ್ಯರನ್ನು ಈಕೆ ವಹಿಸಿ ಮಾಡಿಸುವುದು ಕಡ್ಡಾಯವಾಗಿದೆ. ಯಾಕೆಂದರೆ, ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಹಾಗೂ ರೇಷನ್ ಕಾರ್ಡಿಗೆ ಸಂಬಂಧಿಸಿದಂತೆ ಹಲವಾರು ಹಗರಣಗಳನ್ನು ತಡೆಗಟ್ಟಬಹುದಾಗಿರುತ್ತದೆ. ಈ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ.
ಹೌದು ಸ್ನೇಹಿತರೆ, ಹಲವಾರು ಜನರು ರೇಷನ್ ಕಾರ್ಡ್ ಅನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು ನಿಮಗೆಲ್ಲ ಗೊತ್ತಿದೆ. ಆದ್ದರಿಂದ ಸರ್ಕಾರವು ಈ ರೀತಿ ಆದೇಶವನ್ನು ಹೊರಡಿಸಿರುತ್ತದೆ. ಇದರಿಂದ ಸದಸ್ಯರ ಎಲ್ಲಾ ರೀತಿಯ ಮಾಹಿತಿಗಳು ಸರ್ಕಾರಕ್ಕೆ ದೊರಕುತ್ತವೆ ಇದರಿಂದ ಒಂದು ಒಳ್ಳೆಯ ಉದ್ದೇಶವಿದೆ ಎಂದು ಹೇಳಬಹುದಾಗಿದೆ.
E-KYC ಮಾಡಿಸುವುದು ಹೇಗೆ:
ನಿಮ್ಮ ಹತ್ತಿರ ಇರುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಬೆಳಗ್ಗೆ 7:00 ಯಿಂದ ಸಾಯಂಕಾಲ 9:00 ವರೆಗೆ ನೀವು ರೇಷನ್ ಕಾರ್ಡ್ ನ ಈ-ಕೆವೈಸಿ ಯನ್ನು ಮಾಡಿಸಬಹುದಾಗಿರುತ್ತದೆ. ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದರೆ ನೀವು ಸುಲಭವಾಗಿ ರೇಷನ್ ಕಾರ್ಡ್ ಈ-ಕೆವೈಸಿ ಮಾಡಿಸಬಹುದು.
ರೇಷನ್ ಕಾರ್ಡ್ ಹೊಂದಿರುವಂತಹ ಎಲ್ಲರೂ ಕೂಡ ಆಗಸ್ಟ್ 31ನೇ ತಾರೀಖಿನ ಒಳಗಾಗಿ E-KYC ಯನ್ನು ಕಡ್ಡಾಯವಾಗಿ ಮಾಡಿಸಿ ಅಂದಾಗ ನಿಮ್ಮ ರೇಷನ್ ಕಾರ್ಡಿನಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ. ಈ ಮಾಹಿತಿಯು ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.